ಕಳೆದೊಂದು ವರ್ಷದಿಂದ ನಮ್ಮ ಜೀವನ ಹಾಗೂ ಜೀವನೋಪಾಯಗಳ ಜೊತೆಗೆ ಆಟವಾಡುತ್ತಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತಲೇ ಇವೆ ಸರ್ಕಾರಗಳು.
ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಜನರಿಗೆ ವಿವಿಧ ಬಗೆಗಳಲ್ಲಿ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂಥದ್ದೇ ಒಂದು ಪ್ರಯತ್ನದಲ್ಲಿ, ಪುಣೆ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಕೊರೋನಾ ವೈರಸ್ ಹಬ್ಬುವುದರ ಗಂಭೀರತೆಯನ್ನು ಅರಿಯಲು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸಮುದ್ರ ದಂಡೆಯಲ್ಲಿ ಸಿಕ್ಕ ಪ್ಲಾಸ್ಟಿಕ್ ತ್ಯಾಜ್ಯಗಳಿಂದಲೇ ಬದುಕು ಕಟ್ಟಿಕೊಂಡ ಮಹಿಳೆ..!
ದಿವ್ಯಾಂಗ ಮಂದಿ ಮಾಸ್ಕ್ ಧರಿಸುತ್ತಿರುವ ಈ ವಿಡಿಯೋ ಪೋಸ್ಟ್ ಮಾಡಿರುವ ಪೊಲೀಸರು, “ಸಿಕ್ಕಾಪಟ್ಟೆ ಸೆಕೆ ಮಾಸ್ಕ್ ಹಾಕಲು ಆಗದು ಎಂದು ನೀವು ಅಂದುಕೊಂಡಿದ್ದಲ್ಲಿ ಈ ವಿಡಿಯೋ ನಿಮಗಾಗಿ” ಎಂದು ಪೀಠಿಕೆ ಹಾಕಿದ್ದಾರೆ.