
ಮಹಾರಾಷ್ಟ್ರ ಮಾಹಿತಿ ಕೇಂದ್ರದ ಉಪ ನಿರ್ದೇಶಕ ದಯಾನಂದ್ ಕಾಂಬ್ಳೆ ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಲಾವಣಿ ನೃತ್ಯ ಮಾಡ್ತಿರೋ ಆಟೋ ಚಾಲಕನನ್ನ ಬಾಬಾಜಿ ಕಾಂಬ್ಳೆ ಎಂದು ಗುರುತಿಸಲಾಗಿದೆ. ಇವರು ಪುಣೆ ಜಿಲ್ಲೆಯ ಬಾರಾಮಾತಿಯ ನಿವಾಸಿಯಾಗಿದ್ದಾರೆ. ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಂಡಿದೆ.