alex Certify PUBG ‌ಗಾಗಿ ಯುವಕನಿಂದ 16 ಲಕ್ಷ ರೂ. ಉಡೀಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ‌ಗಾಗಿ ಯುವಕನಿಂದ 16 ಲಕ್ಷ ರೂ. ಉಡೀಸ್…!

ಅಮೃತಸರ್: ಪಬ್‌ಜೀ ಗೀಳು ಅಂಟಿಸಿಕೊಂಡ ಯುವಕರು ಏನೆಲ್ಲ ಮಾಡುತ್ತಿದ್ದಾರೆ. ಪಬ್‌ಜಿಗೆ ಅಡಿಕ್ಟ್ ಆಗಿದ್ದ ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯ 22 ವರ್ಷದ ಯುವಕ ಪ್ರಾಣ ಕಳೆದುಕೊಂಡ ಘಟನೆ ಕಳೆದ ವಾರವಷ್ಟೇ ನಡೆದಿತ್ತು. ಈಗ ಪಂಜಾಬ್‌ನಿಂದ ಇನ್ನೊಂದು ಆತಂಕಕಾರಿ ಸುದ್ದಿ ಹೊರ ಬಿದ್ದಿದೆ.

ಪಬ್‌ಜೀ ಗೇಮ್‌ನ ಗೀಳಿನಿಂದ ಪಂಜಾಬಿನ ಖರಾರ್‌ನ 17 ವರ್ಷದ ಯುವಕ ತನ್ನ ತಂದೆಯ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಉಡಾಯಿಸಿದ್ದಾನೆ. ಆನ್‌ಲೈನ್ ಕ್ಲಾಸ್ ಇದೆ ಎಂದು ಅಪ್ಪನ ಮೊಬೈಲ್ ಪಡೆದ ಯುವಕ ಅದರಲ್ಲಿದ್ದ ಬ್ಯಾಂಕ್ ‌ನ ಆ್ಯಪ್‌ನಿಂದ ತಾನು ಹಾಗೂ ತನ್ನ ಸ್ನೇಹಿತರಿಗಾಗಿ ಪಬ್‌ಜೀ ಡೌನ್‌ಲೋಡ್ ಮಾಡಿದ್ದಾನೆ. ಆದರೆ, ಈ ವಿಷಯ ಮನೆಯವರಿಗೆ ಗೊತ್ತೇ ಇರಲಿಲ್ಲ.

ಬ್ಯಾಂಕ್ ಸ್ಟೇಟ್‌ಮೆಂಟ್ ನೋಡಿದವರು ಹೌಹಾರಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ. ಯುವಕನ ತಂದೆ ತನ್ನ ಆರೋಗ್ಯ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಈ ವಿಷಯವನ್ನು ಬ್ಯಾಂಕ್ ಸಿಬ್ಬಂದಿಯೊಬ್ಬರು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...