ಪಬ್ಜಿ ಗೇಮ್ ಗೀಳಿಗೆ ಬಿದ್ದು ಈಗಾಗಲೇ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಕೋಟಾದ ಗಾಂಧಿ ಕಾಲೋನಿಯಲ್ಲಿ ವಾಸವಾಗಿರುವ 14 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೊಬೈಲ್ ಗೆ ಮೂರು ದಿನದ ಹಿಂದೆ ಪಬ್ಜಿ ಗೇಮ್ ಹಾಕಿಕೊಂಡಿದ್ದ. ಆ ಬಳಿಕ ಹಗಲು-ರಾತ್ರಿಯೆನ್ನದೆ ನಿರಂತರವಾಗಿ ಆಟವಾಡಿದ್ದು, ಮಾನಸಿಕವಾಗಿ ಬಳಲಿದ್ದ.
ಶನಿವಾರದಂದು ಬೆಳಗಿನ ಜಾವ 3 ಗಂಟೆಯವರೆಗೆ ಪಬ್ಜಿ ಆಟವಾಡಿದ ಈತ ಬಳಿಕ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಬ್ಜಿ ಗೇಮ್ ಗೀಳಿನ ಕುರಿತು ಪದೇ ಪದೇ ಎಚ್ಚರಿಕೆ ನೀಡಲಾಗುತ್ತಿದ್ದರೂ ಸಹ ಯುವಜನತೆ ಬುದ್ದಿ ಕಲಿಯುತ್ತಿಲ್ಲ.