alex Certify ಕೋವಿಡ್​ ಗೆದ್ದು ಬಂದ ರಹಸ್ಯ ಬಿಚ್ಚಿಟ್ಟ 82 ರ ವೃದ್ಧೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಗೆದ್ದು ಬಂದ ರಹಸ್ಯ ಬಿಚ್ಚಿಟ್ಟ 82 ರ ವೃದ್ಧೆ….!

ಕೊರೊನಾ ಎರಡನೆ ಅಲೆ ದೇಶದಲ್ಲಿ ತಾಂಡವವಾಡೋಕೆ ಶುರುವಾದ ಮೇಲಂತೂ ಸಾವು ನೋವಿನ ಸುದ್ದಿಗಳನ್ನೇ ಹೆಚ್ಚಾಗಿ ಕೇಳುತ್ತಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಗೋರಕ್​ಪುರದಲ್ಲಿ ನಡೆದ ಘಟನೆಯೊಂದು ಪವಾಡಗಳ ಮೇಲೆ ನಂಬಿಕೆ ಇಡುವಂತೆ ಮಾಡಿದೆ.

ಗೋರಕ್​ಪುರದ 82 ವರ್ಷದ ವೃದ್ಧೆ ವಿದ್ಯಾ ಪ್ರೋನಿಂಗ್​​ ಮೂಲಕ ಕೋವಿಡ್​ 19 ನ್ನು ಜಯಿಸಿದ್ದಾರೆ. ಪ್ರೋನಿಂಗ್​ ಅನ್ನೋದು ಮಕಾಡೆ ಮಲಗಿ ಆಮ್ಲಜನಕವನ್ನ ಹೆಚ್ಚು ಮಾಡಿಕೊಳ್ಳುವ ಒಂದು ವಿಧಾನವಾಗಿದೆ.

ವಿದ್ಯಾ ದೇವಿ ಕಳೆದ 12 ದಿನಗಳಿಂದ ಡೆಡ್ಲಿ ವೈರಸ್​ನ ವಿರುದ್ಧ ಹೋರಾಡುತ್ತಿದ್ದರು. ಆಕೆಯ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿರೋದು ಆತಂಕಕ್ಕೆ ದೂಡಿತ್ತು. ಆದರೆ ಕುಟುಂಬಸ್ಥರು ಮಾತ್ರ ನಿರಾಶವಾದವನ್ನ ಹೊಂದಿರಲಿಲ್ಲ. ಈಕೆಯ ಪುತ್ರ ಹರಿ ಮೋಹನ್​​ ಶ್ರೀವಾತ್ಸವ್​​​ ತಾಯಿ ಜೊತೆಯೇ ಇದ್ದು ಅವರನ್ನ ಕೊರೊನಾದಿಂದ ಹೊರತಂದಿದ್ದಾರೆ.

ತಾಯಿಯ ಸ್ಥಿತಿ ಕಂಡು ಕುಟುಂಬಸ್ಥರು ನೊಂದಿದ್ದರೂ ಸಹ ಯಾರೊಬ್ಬರೂ ವಿಶ್ವಾಸವನ್ನ ಕಳೆದುಕೊಂಡಿರಲಿಲ್ಲ. ವೈದ್ಯರನ್ನ ಸಂಪರ್ಕಿಸಿದ ಬಳಿಕ ಆಕೆಯನ್ನ ಹೊಟ್ಟೆಯಡಿಯಾಗಿ ಮಲಗುವಂತೆ ಹೇಳಲಾಯ್ತು. ಈ ರೀತಿ ಮಾಡಿದ್ದರಿಂದ ವೃದ್ಧೆಯ ಆಕ್ಸಿಜನ್​ ಪ್ರಮಾಣ 79 ರಿಂದ 94ಕ್ಕೆ ಏರಿಕೆ ಕಂಡಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ವಿದ್ಯಾ ದೇವಿ ಪುತ್ರ, ಸೊಂಕಿಗೆ ಒಳಗಾದ ನನ್ನ ತಾಯಿಯ ದೇಹದಲ್ಲಿ ಆಮ್ಲಜನಕದ ಪ್ರಮಾಣಕ್ಕೆ 79ಕ್ಕೆ ಇಳಿಕೆಯಾಗಿತ್ತು. ನಾವೆಲ್ಲರೂ ಚಿಂತಿತರಾಗಿದ್ದೆವು. ಇದಾದ ಬಳಿಕ ಪ್ರೋನಿಂಗ್​ ಬಗ್ಗೆ ಮಾಹಿತಿ ಪಡೆದವು. ಹಾಗೂ ಇದರ ಸಹಾಯದಿಂದ ನನ್ನ ತಾಯಿಯ ಆಕ್ಸಿಜನ್​ ಪ್ರಮಾಣ ಏರಿಕೆಯಾಯ್ತು ಎಂದು ಹೇಳಿದ್ದಾರೆ.

ಸದ್ಯ ವಿದ್ಯಾರ ಆಮ್ಲಜನಕ ಮಟ್ಟ 97 ಆಗಿದೆ. ಈಕೆಯ ಜೊತೆಯಲ್ಲಿ ಸೋಂಕಿಗೆ ಒಳಗಾಗಿದ್ದ ಇತರೆ ಕುಟುಂಬ ಸದಸ್ಯರೂ ಇದೀಗ ಚೇತರಿಸಿಕೊಂಡಿದ್ದಾರೆ. ಪ್ರೋನಿಂಗ್​ ಜೊತೆ ಆಹಾರ ಕ್ರಮ, ಧನಾತ್ಮಕ ಚಿಂತನೆ ವಿದ್ಯಾರ ಆರೋಗ್ಯವನ್ನ ಸುಧಾರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...