ಆಸ್ಪತ್ರೆಗೆ ಹೋಗಲು ಮೈಲಿಗಟ್ಟಲೇ ನಡೆಯಬೇಕಾದ ಅನಿವಾರ್ಯತೆ ಹೊಂದಿರುವ ಗರ್ಭಿಣಿಯರ ಕಷ್ಟವನ್ನ ಅರ್ಥೈಸಿಕೊಂಡ ನೈನಿತಾಲ್ ಜಿಲ್ಲಾಡಳಿತ ಗರ್ಭಿಣಿಯರಿಗೆಂದೇ ಪಲ್ಲಕ್ಕಿ ಸೇವೆಯನ್ನ ಪರಿಚಯಿಸಿದೆ.
ಕುಗ್ರಾಮಗಳಲ್ಲಿ ನೆಲೆಸಿರುವ ಗರ್ಭಿಣಿಯರನ್ನ ಹೆರಿಗೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆತರಲು ಪಲ್ಲಕ್ಕಿ ವ್ಯವಸ್ಥೆ ಮಾಡಿಸಿ ಎಂದು ಜಿಲ್ಲಾಧಿಕಾರಿ ಸವಿನ್ ಬನ್ಸಾಲ್ ಸೂಚನೆ ನೀಡಿದ್ದಾರೆ.
ಇದಕ್ಕಾಗಿ 10 ಲಕ್ಷ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿರುವ ನೈನಿತಾಲ್ ಜಿಲ್ಲಾಡಳಿತ ಜಿಲ್ಲೆಯಲ್ಲಿ 500 ಪಲ್ಲಕ್ಕಿಗಳನ್ನ ನಿರ್ಮಿಸುವಂತೆ ಮುಖ್ಯ ವೈದ್ಯಕೀಯ ಅಧಿಕಾರಿಗೆ ಸೂಚನೆ ನೀಡಿದೆ,
ವಿಶೇಷವಾಗಿ ಧಾರಿ, ರಾಮಗರ್, ಒಖಾಲ್ಕಂಡ , ಬೆಟಲ್ ಘಾಟ್ ಹಾಗೂ ಭೀಮ್ತಾಲ್ನಂತಹ ಕುಗ್ರಾಮಗಳನ್ನ ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಜಾರಿಗೆ ತರಲಾಗಿದೆ
ಅಲ್ಲದೇ ಪಲ್ಲಕ್ಕಿಯಲ್ಲಿ ಗರ್ಭಿಣಿಯರನ್ನ ಸ್ವಯಂಪ್ರೇರಿತರಾಗಿ ಹೊತ್ತು ತರುವವರಿಗೆ 2 ಸಾವಿರ ರೂಪಾಯಿ ಗೌರವ ಧನ ನೀಡಲಾಗುವುದು ಎಂದು ಬನ್ಸಾಲ್ ಹೇಳಿದ್ದಾರೆ.