ಮಯೂರ್ಭಂಜ್ ಜಿಲ್ಲೆಯ ಶರತ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ರೀನಾ ಬಕ್ಸಲ್ ಎಂಬವರು ಮಾರ್ಚ್ 28ರಿಂದ ಆದೇಶ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಹಾಗೂ ಪೊಲೀಸ್ ಠಾಣೆಯ ಉಸ್ತುವಾರಿಯನ್ನ ಸಹಾಯಕ ಸಬ್ ಇನ್ಸ್ಪೆಕ್ಟರ್ ಬಿ.ಡಿ. ದಾಸ್ಮೋಹಪಾತ್ರ ಎಂಬವರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಅಧಿಕಾರಿ ರೀನಾ ಬಕ್ಸಲ್ರಿಂದ ನಮಗೆ ಹಿಂಸೆಯಾಗಿದೆ ಎಂದು ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿ ಆರೋಪಿಸಿದ ನಂತರ ಈ ಕ್ರಮವನ್ನ ಕೈಗೊಳ್ಳಲಾಗಿದೆ.
ಗುರುಬಾರಿ ಎಂಬಾಕೆ ತನ್ನ ಪತಿ ವಿಕ್ರಂ ಎಂಬವರ ಜೊತೆ ಬೈಕ್ನಲ್ಲಿ ಉದಾಲಾ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ತೆರಳುತ್ತಿದ್ದರು. ಈ ವೇಳೆ ವಿಕ್ರಂ ಹೆಲ್ಮೆಟ್ ಧರಿಸಿದ್ದರೆ ಗುರುಬಾರಿ ಹೆಲ್ಮೆಟ್ ಧರಿಸಿರಲಿಲ್ಲ.
ಆಕೆಯ ಆರೋಗ್ಯ ಸ್ಥಿತಿ ಸರಿಯಲ್ಲದ ಕಾರಣ ಆಕೆ ಹೆಲ್ಮೆಟ್ ಧರಿಸಿರಲಿಲ್ಲ. ಆದರೆ ರೀನಾ ಬಕ್ಸಲ್ ಈ ಮಾತನ್ನ ಕೇಳಿರಲಿಲ್ಲ. 500 ರೂಪಾಯಿ ದಂಡ ವಿಧಿಸಿದ್ದು ಮಾತ್ರವಲ್ಲದೇ ತಮ್ಮ ಪತ್ನಿ ಮೂರು ಕಿಲೋಮೀಟರ್ವರೆಗೆ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ ಎಂದು ಪತಿ ವಿಕ್ರಂ ಆರೋಪಿಸಿದ್ದಾರೆ.