ಈಗೇನಿದ್ದರೂ ಬೈಕು ಕಾರುಗಳದ್ದೇ ಕಾಲ. ಸೈಕಲ್ ಬಳಕೆ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ. ಸೈಕಲ್ ಬಳಕೆ ಮಾಡೋರು ಕೂಡ ಹೈ ಟೆಕ್ ಬೈಸಿಕಲ್ಗಳ ಮೊರೆ ಹೋಗ್ತಿದ್ದಾರೆ. ಆದರೆ ಕಾರ್ಕಳದ ನಿಟ್ಟೆ ನಿವಾಸಿಯಾಗಿರುವ ಪೋಸ್ಟ್ ಮ್ಯಾನ್ ಒಬ್ಬರು ಕಳೆದ 36 ವರ್ಷಗಳಿಂದ ತನ್ನ ತಂದೆಯಿಂದ ಉಡುಗೊರೆಯಾಗಿ ಸಿಕ್ಕ ಬೈಸಿಕಲ್ನ್ನ ಬಳಕೆ ಮಾಡುತ್ತಿದ್ದಾರೆ.
1984ರಿಂದ ರವೀಂದ್ರ ಕುಮಾರ್ ಬೈಲೂರು ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿದ್ದಾರೆ. ಅಂದಿನಿಂದ ರವೀಂದ್ರ ಕುಮಾರ್ ಇದೇ ಬೈಸಿಕಲ್ನ್ನು ಬಳಕೆ ಮಾಡ್ತಿದ್ದಾರಂತೆ. ಪ್ರತಿದಿನ ರವೀಂದ್ರ ಇದೇ 36 ವರ್ಷದ ಸೈಕಲ್ನಲ್ಲಿ 35 ಕಿಲೋಮೀಟರ್ವರೆಗೆ ಸವಾರಿ ಮಾಡ್ತಾರೆ.
ಕುಮಾರ್ರ ತಂದೆ ಬ್ಯಾಂಕ್ ಉದ್ಯೋಗಿ ಆಗಿದ್ದರು. ತಂದೆಯಿಂದ ಬೈಸಿಕಲ್ನ್ನ ಉಡುಗೊರೆಯಾಗಿ ಪಡೆದಿರುವ ರವೀಂದ್ರ ತಮ್ಮ ನಿವೃತ್ತಿಯವರೆಗೂ ಇದೇ ಸೈಕಲ್ ಏರಿ ಸೇವೆ ಸಲ್ಲಿಸೋದಾಗಿ ಹೇಳಿದ್ದಾರೆ. ಅನೇಕರು ನನ್ನ ಸೈಕಲ್ ನೋಡಿ ಗುಜರಿ ಅಂತಾ ಅಪಹಾಸ್ಯ ಮಾಡ್ತಾರೆ. ಆದರೆ ನನ್ನ ತಂದೆಯ ಮೇಲಿನ ಪ್ರೀತಿಗಾಗಿ ನಾನು ಈ ಸೈಕಲ್ನ್ನು ಬಿಡುವ ಮಾತೇ ಇಲ್ಲ ಎಂದಿದ್ದಾರೆ .