alex Certify ಸೈಕಲ್ ಏರಿ ನಿತ್ಯ 35 ಕಿ.ಮೀ ಪ್ರಯಾಣ ಮಾಡ್ತಾರೆ ಈ ಮಾದರಿ ಪೋಸ್ಟ್​ ಮಾಸ್ಟರ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ಏರಿ ನಿತ್ಯ 35 ಕಿ.ಮೀ ಪ್ರಯಾಣ ಮಾಡ್ತಾರೆ ಈ ಮಾದರಿ ಪೋಸ್ಟ್​ ಮಾಸ್ಟರ್.​..!

ಈಗೇನಿದ್ದರೂ ಬೈಕು ಕಾರುಗಳದ್ದೇ ಕಾಲ. ಸೈಕಲ್​ ಬಳಕೆ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ. ಸೈಕಲ್​ ಬಳಕೆ ಮಾಡೋರು ಕೂಡ ಹೈ ಟೆಕ್​ ಬೈಸಿಕಲ್​ಗಳ ಮೊರೆ ಹೋಗ್ತಿದ್ದಾರೆ. ಆದರೆ ಕಾರ್ಕಳದ ನಿಟ್ಟೆ ನಿವಾಸಿಯಾಗಿರುವ ಪೋಸ್ಟ್​​ ಮ್ಯಾನ್​​​ ಒಬ್ಬರು ಕಳೆದ 36 ವರ್ಷಗಳಿಂದ ತನ್ನ ತಂದೆಯಿಂದ ಉಡುಗೊರೆಯಾಗಿ ಸಿಕ್ಕ ಬೈಸಿಕಲ್​​ನ್ನ ಬಳಕೆ ಮಾಡುತ್ತಿದ್ದಾರೆ.

1984ರಿಂದ ರವೀಂದ್ರ ಕುಮಾರ್​​ ಬೈಲೂರು ಅಂಚೆ ಕಚೇರಿಯಲ್ಲಿ ಪೋಸ್ಟ್​ ಮ್ಯಾನ್​ ಆಗಿದ್ದಾರೆ. ಅಂದಿನಿಂದ ರವೀಂದ್ರ ಕುಮಾರ್​ ಇದೇ ಬೈಸಿಕಲ್​ನ್ನು ಬಳಕೆ ಮಾಡ್ತಿದ್ದಾರಂತೆ. ಪ್ರತಿದಿನ ರವೀಂದ್ರ ಇದೇ 36 ವರ್ಷದ ಸೈಕಲ್​​ನಲ್ಲಿ 35 ಕಿಲೋಮೀಟರ್​​ವರೆಗೆ ಸವಾರಿ ಮಾಡ್ತಾರೆ.

ಕುಮಾರ್​​ರ ತಂದೆ ಬ್ಯಾಂಕ್​ ಉದ್ಯೋಗಿ ಆಗಿದ್ದರು. ತಂದೆಯಿಂದ ಬೈಸಿಕಲ್​ನ್ನ ಉಡುಗೊರೆಯಾಗಿ ಪಡೆದಿರುವ ರವೀಂದ್ರ ತಮ್ಮ ನಿವೃತ್ತಿಯವರೆಗೂ ಇದೇ ಸೈಕಲ್​ ಏರಿ ಸೇವೆ ಸಲ್ಲಿಸೋದಾಗಿ ಹೇಳಿದ್ದಾರೆ. ಅನೇಕರು ನನ್ನ ಸೈಕಲ್​ ನೋಡಿ ಗುಜರಿ ಅಂತಾ ಅಪಹಾಸ್ಯ ಮಾಡ್ತಾರೆ. ಆದರೆ ನನ್ನ ತಂದೆಯ ಮೇಲಿನ ಪ್ರೀತಿಗಾಗಿ ನಾನು ಈ ಸೈಕಲ್​ನ್ನು ಬಿಡುವ ಮಾತೇ ಇಲ್ಲ ಎಂದಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...