ಬಾಲಕಿಯೊಬ್ಬಳ ಮೊದಲ ವರ್ಷದ ಹುಟ್ಟಿದ ಹಬ್ಬಕ್ಕೆ ಪೊಲೀಸರೇ ಕೇಕ್ ತಂದುಕೊಟ್ಟು ಮೆಚ್ಚುಗೆ ಗಳಿಸಿದ್ದಾರೆ.
ಈ ಸಂಬಂಧದ ವಿಡಿಯೋವೊಂದು ಈಗ ಪ್ರಸಿದ್ಧವಾಗಿದೆ. ಪೇಟ ತೊಟ್ಟ ಪಂಜಾಬ್ ಪೊಲೀಸ್ ಸಿಬ್ಬಂದಿ ಕೇಕ್ ಬಾಕ್ಸ್ ಹಿಡಿದು ಕಾಲಿಂಗ್ ಬೆಲ್ ಒತ್ತುತ್ತಾರೆ. ಮಗುವನ್ನು ಎತ್ತಿಕೊಂಡು ಬಾಗಿಲು ತೆಗೆಯುವ ಅಮ್ಮ ಕೇಕ್ ನೋಡಿ ಅಚ್ಚರಿಗೊಳ್ಳುತ್ತಾರೆ.
ಮಕ್ಕಳ ಮೊದಲ ವರ್ಷದ ಹುಟ್ಟಿದ ಹಬ್ಬಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಆದರೆ, ಕರೋನಾ ಲಾಕ್ಡೌನ್ ನಿಂದ ಪಾಲಕರು ಹೊರಗೆ ಹೋಗಿ ಕೇಕ್ ತಂದು ಹುಟ್ಟಿದ ಹಬ್ಬ ಆಚರಿಸಲು ಸಾಧ್ಯವಿಲ್ಲ. ಇದರಿಂದ ಲಾಕ್ಡೌನ್ ಅವಧಿಯಲ್ಲಿ ಮೊದಲ ವರ್ಷದ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವ ಎಲ್ಲರ ಮನೆಗಳಿಗೂ ಕೇಕ್ ನೀಡಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ಎಸ್ಪಿ ತಿಳಿಸಿದ್ದಾರೆ.