alex Certify ರಸ್ತೆ ಗುಡಿಸಿ ನೆಟ್ಟಿಗರ ಹೃದಯ ಗೆದ್ದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಗುಡಿಸಿ ನೆಟ್ಟಿಗರ ಹೃದಯ ಗೆದ್ದ ಪೊಲೀಸ್

ಒಡಿಶಾದ ಸಂಚಾರಿ ಪೊಲೀಸ್‌ ಪೇದೆಯೊಬ್ಬರು ರಸ್ತೆಯನ್ನು ಗುಡಿಸಿ ಸಾರ್ವಜನಿಕ ಕಳಕಳಿ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತಮ್ಮ ಕರ್ತವ್ಯದ ಎಲ್ಲೆಯನ್ನೂ ಮೀರಿ ಅನುಕರಣನೀಯ ವರ್ತನೆ ತೋರಿರುವ ಈ ಪೇದೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಕಟಕ್‌ನ ಸಿಕಾರ್‌ಪುರ ಚೌಕದ ಬಳಿಯ ರಸ್ತೆಯೊಂದರಲ್ಲಿ ಇದ್ದ ಕಸದ ಮೇಲೆ ದ್ವಿಚಕ್ರ ವಾಹನ ಸಂಚಾರಿಗಳು ಜಾರಿ ಬೀಳದೇ ಇರಲಿ ಎಂದು ಈ ಪೊಲೀಸಪ್ಪ ಅದನ್ನು ಗುಡಿಸಿ ತೆಗೆದು ಹಾಕುತ್ತಿದ್ದಾರೆ. ಈ ಪೇದೆಯನ್ನು ಲಲಿತ್‌ ಮೋಹನ್‌ ರೌತ್‌ ಎಂದು ಗುರುತಿಸಲಾಗಿದ್ದು, ಇವರು ಕಟಕ್‌ ಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಾರೆ.

22 ಸೆಕೆಂಡ್‌ಗಳ ಈ ವಿಡಿಯೋ, ಪೊಲೀಸರಲ್ಲೂ ಸಹ ಮಾನವೀಯತೆ ಹಾಗೂ ಸಾರ್ವಜನಿಕ ಕಳಕಳಿ ಇರುವ ಸಾಕಷ್ಟು ಮಂದಿ ಇದ್ದಾರೆ ಎಂದು ಸಾರಿ ಹೇಳುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...