ಒಡಿಶಾದ ಸಂಚಾರಿ ಪೊಲೀಸ್ ಪೇದೆಯೊಬ್ಬರು ರಸ್ತೆಯನ್ನು ಗುಡಿಸಿ ಸಾರ್ವಜನಿಕ ಕಳಕಳಿ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ತಮ್ಮ ಕರ್ತವ್ಯದ ಎಲ್ಲೆಯನ್ನೂ ಮೀರಿ ಅನುಕರಣನೀಯ ವರ್ತನೆ ತೋರಿರುವ ಈ ಪೇದೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
ಕಟಕ್‌ನ ಸಿಕಾರ್‌ಪುರ ಚೌಕದ ಬಳಿಯ ರಸ್ತೆಯೊಂದರಲ್ಲಿ ಇದ್ದ ಕಸದ ಮೇಲೆ ದ್ವಿಚಕ್ರ ವಾಹನ ಸಂಚಾರಿಗಳು ಜಾರಿ ಬೀಳದೇ ಇರಲಿ ಎಂದು ಈ ಪೊಲೀಸಪ್ಪ ಅದನ್ನು ಗುಡಿಸಿ ತೆಗೆದು ಹಾಕುತ್ತಿದ್ದಾರೆ. ಈ ಪೇದೆಯನ್ನು ಲಲಿತ್ ಮೋಹನ್ ರೌತ್ ಎಂದು ಗುರುತಿಸಲಾಗಿದ್ದು, ಇವರು ಕಟಕ್ ಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಾರೆ.
22 ಸೆಕೆಂಡ್‌ಗಳ ಈ ವಿಡಿಯೋ, ಪೊಲೀಸರಲ್ಲೂ ಸಹ ಮಾನವೀಯತೆ ಹಾಗೂ ಸಾರ್ವಜನಿಕ ಕಳಕಳಿ ಇರುವ ಸಾಕಷ್ಟು ಮಂದಿ ಇದ್ದಾರೆ ಎಂದು ಸಾರಿ ಹೇಳುವಂತಿದೆ.