ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ಉದ್ಯಮಿಯೊಬ್ಬ ಕೃಷಿ ಮಸೂದೆ ಖಂಡಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವೇಷ ಮರೆಸಿಕೊಂಡು ಭಾಗಿಯಾಗಿದ್ದು ಈತನನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಉತ್ತರ ಪ್ರದೇಶದ ಮುರಾದ್ ನಗರದ ನಿವಾಸಿ ಪ್ರವೀಣ್ ಡಿಸೆಂಬರ್ 1ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಗಾಜಿಪುರ-ಗಾಜಿಯಾಬಾದ್ ಗಡಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಪ್ರವೀಣ್ ಮನೆಯಿಂದ ನಾಪತ್ತೆಯಾಗಿದ್ದರು. ಆದರೆ ಕೆಲ ದಿನಗಳ ಬಳಿಕ ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಈ ಬಾರಿಯೂ ಪ್ರವೀಣ್ ವಾಪಸ್ಸಾಗ್ತಾರೆ ಅಂತಾ ಡಿಸೆಂಬರ್ 12ನೇ ತಾರೀಖಿನವರೆಗೂ ಕುಟುಂಬಸ್ಥರು ದೂರು ನೀಡಿರಲಿಲ್ಲ. ದೂರು ದಾಖಲಾಗುತ್ತಿದ್ದಂತೆ ಪ್ರವೀಣ್ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಸಿಖ್ರಂತೆ ಗಡ್ಡ ಬೆಳೆಸಿದ್ದ ಪ್ರವೀಣ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರ ಕಾರನ್ನ ನೋಡಿ ಪತ್ತೆ ಹಚ್ಚಿದ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ ವೇಳೆ ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ವೇಷ ಮರೆಸಿಕೊಂಡಿದ್ದೆ ಎಂದು ಹೇಳಿದ್ದಾರೆ.