alex Certify ಸೂರ್ಯ ದೇವಾಲಯದ ಫೋಟೋ ಹಂಚಿಕೊಂಡ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯ ದೇವಾಲಯದ ಫೋಟೋ ಹಂಚಿಕೊಂಡ ಮೋದಿ

ದೇಶದ ಅನೇಕ ಕಡೆ ಭಾರೀ ಮಳೆಯಾಗ್ತಿದೆ. ಕೆಲವು ಕಡೆ ಪ್ರವಾಹ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ, ಫೋಟೋಗಳು ಹರಿದಾಡ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೂಡ ಮಳೆಯ ವಿಡಿಯೋ ಹಂಚಿಕೊಂಡಿದ್ದಾರೆ. ಗುಜರಾತಿನ ಮೊಧೇರಾ ಸೂರ್ಯ ದೇವಾಲಯದ ವಿಡಿಯೋವನ್ನು ಮೋದಿ ಟ್ವೀಟ್ ಮಾಡಿದ್ದಾರೆ.

ಮೊಧೇರಾದ ಸಾಂಪ್ರದಾಯಿಕ ಸೂರ್ಯ ದೇವಾಲಯವು ಮಳೆಯ ಸಮಯದಲ್ಲಿ ಅದ್ಭುತವಾಗಿ ಕಾಣುತ್ತದೆ. ನೀವು ಸಹ ನೋಡಿ ಎಂದು ಮೋದಿ ಶೀರ್ಷಿಕೆ ಹಾಕಿದ್ದಾರೆ. ಮೋದಿ ವಿಡಿಯೋದಲ್ಲಿ ಸೂರ್ಯ ದೇವಾಲಯದಲ್ಲಿ ಮಳೆ ನೀರನ್ನು ಕಾಣಬಹುದು. ಈ ವಿಡಿಯೋದಲ್ಲಿ ದೇವಾಲಯದ ದರ್ಶನ ಪಡೆಯಬಹುದು.

ಮೋದಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈವರೆಗೆ 30.18 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...