ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಪ್ರಧಾನಿ ಮೋದಿ ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತ ಮಾಡಬೇಕು ಎಂಬ ಶಪಥವನ್ನ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಹೇಳಿದ್ರು.
ಡಿಸಿಗಳು ಫೀಲ್ಡ್ ಕಮಾಂಡರ್ಗಳಂತೆ ಕೆಲಸ ಮಾಡಬೇಕಿದೆ. ಕೋವಿಡ್ 19 ನಿಯಂತ್ರಣದ ಜೊತೆಯಲ್ಲಿ ಜನರ ಜೀವನ ನಿರ್ವಹಣೆಯಲ್ಲೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಕೊರೊನಾ ತುತ್ತತುದಿಯನ್ನ ತಲುಪಿ ಇದೀಗ ಇಳಿಕೆ ಕಾಣುತ್ತಿದೆ. ಪ್ರತಿ ವ್ಯಕ್ತಿಯ ಜೀವ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಟ ನಡೆಸಬೇಕು ಎಂದು ಹೇಳಿದ್ರು.
ಮಳೆಗಾಲ ಇರೋದ್ರಿಂದ ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಹುದು. ಆಕ್ಸಿಜನ್ ಸಮಸ್ಯೆ ಉಂಟಾಗಬಹುದು. ಇವೆಲ್ಲವನ್ನ ಎದುರಿಸಲು ನೀವು ಸದೃಢ ಆಗಬೇಕಿದೆ. ನಿಮ್ಮ ಜಿಲ್ಲೆಯ ಸವಾಲು ಏನು ಅನ್ನೋದು ನಿಮಗೆ ತಿಳಿದಿರುತ್ತೆ. ಇದನ್ನೆಲ್ಲ ಸರಿಯಾಗಿ ಮ್ಯಾಪ್ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ರು.
ಕೃಷಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಲಾಕ್ಡೌನ್ ಇರೋದಿಲ್ಲ. ಕೃಷಿ ಭೂಮಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದ್ರು. ಅಲ್ಲದೇ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ಗಳನ್ನ ಕೇಂದ್ರ ಸರ್ಕಾರ ನಿರ್ಮಿಸಲಿದೆ ಎಂದು ಇದೇ ವೇಳೆ ಅಭಯ ನೀಡಿದ್ರು.
ಕೊರೊನಾ ಲಸಿಕೆ ವಿಚಾರವಾಗಿಯೂ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅನೇಕ ಕಡೆ ಲಸಿಕೆ ಪೋಲಾಗಿದೆ. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ. 15 ದಿನಗಳ ಮುಂಚಿತವಾಗಿಯೇ ರಾಜ್ಯಗಳು ಲಸಿಕೆ ಲಭ್ಯತೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಬೇಕು. ನಿಮ್ಮ ರಾಜ್ಯಗಳ ಸಿಎಂಗಳ ಮಾರ್ಗದರ್ಶನದೊಂದಿಗೆ ಡಿಸಿಗಳು ಕೊರೊನಾ ವಿರುದ್ಧ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಎಂದು ಹೇಳಿದ್ರು.