alex Certify ಮೇ 18 ರಿಂದ ಹೊಸ ನಿಯಮ: ಲಾಕ್ಡೌನ್ ತೆರವಿನ ನಿರೀಕ್ಷೆಯಲ್ಲಿದ್ದವರಿಗೆ ಪ್ರಧಾನಿ ಮೋದಿ ‘ಬಿಗ್ ಶಾಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 18 ರಿಂದ ಹೊಸ ನಿಯಮ: ಲಾಕ್ಡೌನ್ ತೆರವಿನ ನಿರೀಕ್ಷೆಯಲ್ಲಿದ್ದವರಿಗೆ ಪ್ರಧಾನಿ ಮೋದಿ ‘ಬಿಗ್ ಶಾಕ್’

ನವದೆಹಲಿ: ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ 5 ನೇ ಬಾರಿಗೆ ಭಾಷಣ ಮಾಡಿದ್ದಾರೆ.

4 ನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ ಮೋದಿ, 4ನೇ ಹಂತದ ಲಾಕ್ ಡೌನ್ ಸಂಪೂರ್ಣವಾಗಿ ಹೊಸದಾಗಿರುತ್ತದೆ.  ಲಾಕ್ ಡೌನ್ 4 ಹೊಸ ರೂಪ ಮತ್ತು ಹೊಸ ನಿಯಮದೊಂದಿಗೆ ಬರಲಿದೆ. ಮೇ 18 ಕ್ಕೆ ಮೊದಲು ಲಾಕ್ ಡೌನ್ ನಿಯಮ ತಿಳಿಸಲಾಗುವುದು. ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೋನಾ ವಿರುದ್ಧದ ಹೋರಾಟ ಸುದೀರ್ಘವಾಗಿರುತ್ತದೆ. ಇದಕ್ಕಾಗಿ ಲಾಕ್ಡೌನ್ ಮುಂದುವರಿಸುವುದು ಅನಿವಾರ್ಯವಾಗಿದ್ದು, ಹೊಸ ರೂಪ ಹೊಸ ನಿಯಮದೊಂದಿಗೆ ಲಾಕ್ಡೌನ್ 4 ಜಾರಿ ಮಾಡಲಾಗುವುದು. ಮೇ 18 ರಿಂದ ಹೊಸ ಲಾಕ್ ಡೌನ್ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...