alex Certify ಮೋದಿ ಬಿಡುಗಡೆ ಮಾಡಿದ ನಾಣ್ಯದಲ್ಲಿನ ವಿಶೇಷತೆಯೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಬಿಡುಗಡೆ ಮಾಡಿದ ನಾಣ್ಯದಲ್ಲಿನ ವಿಶೇಷತೆಯೇನು ಗೊತ್ತಾ…?

Rs 100 Coin: पीएम मोदी ने जारी किया 100 रुपये का सिक्का, जानिए क्यों है ये  बेहद खास | business - News in Hindi - हिंदी न्यूज़, समाचार,  लेटेस्ट-ब्रेकिंग न्यूज़ ...

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂರು ರೂಪಾಯಿ ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಗ್ವಾಲಿಯರ್ ರಾಜಮಾತೆ ಗೌರವಾರ್ಥ ಈ ನೂರು ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗ್ತಿದೆ. ವಿಜಯರಾಜೇ ಸಿಂಧ್ಯಾ ಅವರನ್ನು ಗ್ವಾಲಿಯರ್ ರಾಜಮಾತೆ ಎಂದು ಕರೆಯಲಾಗುತ್ತದೆ.

100 ರೂಪಾಯಿಗಳ ಈ ಸ್ಮರಣಾರ್ಥ ನಾಣ್ಯವನ್ನು ಹಣಕಾಸು ಸಚಿವಾಲಯ ಸಿದ್ಧಪಡಿಸಿದೆ. ರಾಜಮಾತೆ ವಿಜಯರಾಜೇ ಸಿಂಧ್ಯಾ ಕುಟುಂಬಸ್ಥರು, ಕೇಂದ್ರದ ಕೆಲ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ನಾಣ್ಯದ ಎರಡೂ ಬದಿಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ನಾಣ್ಯದ ಒಂದು ಬದಿಯಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಅವರ ಚಿತ್ರವಿದೆ. ಅದ್ರ ಮೇಲ್ಭಾಗದಲ್ಲಿ  ಶ್ರೀಮತಿ ವಿಜಯ ರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಕೆಳಭಾಗದಲ್ಲಿ ಇದನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಅವರು ಹುಟ್ಟಿದ ವರ್ಷವನ್ನು 1919 ಮತ್ತು ಜನನ ಶತಮಾನೋತ್ಸವ 2019ನ್ನು ಬರೆಯಲಾಗಿದೆ. ಈ ನಾಣ್ಯದ ಇನ್ನೊಂದು ಬದಿಯಲ್ಲಿ ಭಾರತವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಹಾಗೆ ಅಶೋಕ ಸ್ತಂಭದ ಚಿಹ್ನೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...