alex Certify ಪ್ರಧಾನಿ ಮೋದಿ ಒಬ್ಬ ‘ಹೇಡಿ’ ಎಂದ ಕಾಂಗ್ರೆಸ್​ ನಾಯಕ ರಾಹುಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಒಬ್ಬ ‘ಹೇಡಿ’ ಎಂದ ಕಾಂಗ್ರೆಸ್​ ನಾಯಕ ರಾಹುಲ್

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ . ದೇಶದ ಭೂಭಾಗವನ್ನ ಕಾಪಾಡೋದು ಪ್ರಧಾನಿಯ ಜವಾಬ್ದಾರಿ. ಆದರೆ ಪ್ರಧಾನಿ ಮೋದಿ ದೇಶದ ಭೂಮಿಯನ್ನ ಚೀನಾಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಚೀನಾದ ಮುಂದೆ ನಿಲ್ಲಲಾಗದ ಒಬ್ಬ ಹೇಡಿ ಎಂದು ರಾಹುಲ್​ ಗಾಂಧಿ ಗುಡುಗಿದ್ದಾರೆ.

ಗುರುವಾರ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್​ ಸಿಂಗ್,​ ಚೀನಾ ಹಾಗೂ ಭಾರತದ ಮಿಲಿಟರಿ ಒಪ್ಪಂದದ ಬಗ್ಗೆ ವಿಸ್ತೃತ ವಿವರಣೆ ನೀಡಿದ್ದರು. ಈ ಒಪ್ಪಂದದ ವಿರುದ್ಧ ಕಿಡಿಕಾರಿರುವ ರಾಹುಲ್​ ಗಾಂಧಿ ಇದರಿಂದ ಭಾರತೀಯರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಪೂರ್ವ ಲಡಾಖ್​ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ಸೈನ್ಯವನ್ನ ಈಗ ಫಿಂಗರ್ ಪಾಯಿಂಂಟ್​ ಮೂರರಲ್ಲಿ ಇರಿಸಲಾಗಿದೆ. ಫಿಂಗರ್​ ಪಾಯಿಂಟ್​ ನಾಲ್ಕು ಕೂಡ ಭಾರತಕ್ಕೇ ಸೇರಿದ ಪ್ರದೇಶವಾಗಿದೆ. ಆದರೆ ಫಿಂಗರ್​ 4ರಿಂದ ಫಿಂಗರ್​3ಕ್ಕೆ ಭಾರತೀಯ ಸೈನ್ಯವನ್ನ ಕರೆಯಿಸಿಕೊಳ್ಳುವ ಮೂಲಕ ನಮ್ಮ ದೇಶದ ಪ್ರದೇಶವನ್ನ ಚೀನಾಗೆ ಪ್ರಧಾನಿ ಮೋದಿ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...