alex Certify ಮೇ 17ರ ನಂತರವೂ ಲಾಕ್ಡೌನ್ ಮುಂದುವರಿಕೆ: ಸಡಿಲಿಕೆ ಮಾಡಬೇಕೆಂಬ ಮುಖ್ಯಮಂತ್ರಿಗಳ ಮಾತು ಒಪ್ಪದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 17ರ ನಂತರವೂ ಲಾಕ್ಡೌನ್ ಮುಂದುವರಿಕೆ: ಸಡಿಲಿಕೆ ಮಾಡಬೇಕೆಂಬ ಮುಖ್ಯಮಂತ್ರಿಗಳ ಮಾತು ಒಪ್ಪದ ಮೋದಿ

ನವದೆಹಲಿ: ಮೇ 17ರ ನಂತರವೂ ಲಾಕ್ಡೌನ್ ಮುಂದುವರೆಯುವುದು ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಂವಾದ ನಡೆಸಿದ್ದು ಕೆಲವು ವಿನಾಯಿತಿಗಳನ್ನು ಮುಂದುವರೆಸಲು ಚರ್ಚೆ ನಡೆಸಿದ್ದಾರೆ.

ಲಾಕ್ಡೌನ್ ಸಂಪೂರ್ಣ ತೆರವುಗೊಳಿಸುವಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ನೀಡಿದ ಸಲಹೆಯನ್ನು ಕೇಳಿದ ಮೋದಿ ಒಪ್ಪಿಗೆ ನೀಡಿಲ್ಲ. ಒಂದೇ ಸಲಕ್ಕೆ ಲಾಕ್ಡೌನ್ ತೆರವುಗೊಳಿಸುವುದಿಲ್ಲ. ಅದೇ ವೇಳೆ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕೂಡ ಆಗುವುದಿಲ್ಲ. ಮೇ 17ರ ನಂತರ ಆರ್ಥಿಕ ಚಟುವಟಿಕೆಗಳ ಆರಂಭದ ಜೊತೆಗೆ ಲಾಕ್ಡೌನ್ ಕೆಲವು ಷರತ್ತು ಮತ್ತು ವಿನಾಯಿತಿಗಳೊಂದಿಗೆ ಮುಂದುವರೆಯಲಿದೆ. ರಾಜ್ಯ ಸರ್ಕಾರಗಳು ಮೇ 15 ರೊಳಗೆ ತಮ್ಮ ಸಲಹೆಗಳನ್ನು ಕಳುಹಿಸಿಕೊಡುವಂತೆ ಮೋದಿ ತಿಳಿಸಿದ್ದಾರೆ.

ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಮಹತ್ವದಾಗಿದೆ. ಲಾಕ್ಡೌನ್ ನಂತರದಲ್ಲಿ ದೇಶದ ಜನರ ಜೀವನ ವಿಧಾನದಲ್ಲಿ ಬದಲಾವಣೆ ಕಂಡುಬಂದಿದೆ. ನಾವು ಹೊಸ ಮಾದರಿಯ ತಂತ್ರಜ್ಞಾನ, ಜೀವನ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಬೇಕೆಂದು ಹೇಳಿದ್ದು ಅದಕ್ಕೆ ಒಪ್ಪದ ಮೋದಿ ಒಂದೇ ಸಲಕ್ಕೆ ಲಾಕ್ಡೌನ್ ತೆರವುಗೊಳಿಸಲು ಆಗುವುದಿಲ್ಲ. ನಿಮ್ಮ ಸಲಹೆಗಳನ್ನು ಮೇ 15ರೊಳಗೆ ಕಳುಹಿಸಿಕೊಡಿ. ಕೆಲವು ವಿನಾಯಿತಿಗಳೊಂದಿಗೆ ಲಾಕ್ ಡೌನ್ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...