ಭಾರತೀಯರಿಗೆ ಕ್ರಿಕೆಟ್ ಮೇಲೆ ಇರುವಷ್ಟು ಪ್ರೀತಿ, ಅಭಿಮಾನ ಇತರೆ ಕ್ರಿಡೆಗಳ ಮೇಲೆ ಇಲ್ಲ ಅನ್ನೋದು ಅನೇಕ ಬಾರಿ ಸಾಬೀತಾಗಿದೆ. ಟಿವಿಯಲ್ಲಿ ಕ್ರಿಕೆಟ್ ನೋಡ್ತಾ ನೆಚ್ಚಿನ ಆಟಗಾರನಿಗೆ ಸಪೋರ್ಟ್ ಮಾಡೋದ್ರಿಂದ ಹಿಡಿದು ಗಲ್ಲಿ ಕ್ರಿಕೆಟ್ನವರೆಗೂ ಚೆಂಡು ಹಾಗೂ ಬ್ಯಾಟ್ನ ಮೇಲಿನ ಪ್ರೀತಿ ಕೊನೆಯಾಗೋದಿಲ್ಲ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ಒಂದು ನೆಟ್ಟಿಗರಿಗೆ ಸಪ್ರೈಸ್ ಒಂದನ್ನ ನೀಡಿದೆ.
ಮಹರ್ಷಿ ವೇದಿಕ್ ಪರಿವಾರ ನಡೆಸಿದ ಈ ಟೂರ್ನಮೆಂಟ್ನಲ್ಲಿ ಆಟಗಾರರು ಧೋತಿ ಹಾಗೂ ಟೀ ಶರ್ಟ್ ಧರಿಸಿದ್ದು ಕಂಡು ಬಂತು. ಒಂದು ತಂಡ ಕೇಸರಿ ಬಣ್ಣದ ಟೀ ಶರ್ಟ್ ಹಾಕಿದ್ರೆ ಇನ್ನೊಂದು ತಂಡ ಬಿಳಿ ಬಣ್ಣದ ಟೀ ಶರ್ಟ್ ಹಾಕಿತ್ತು. ಆದರೆ ಎರಡೂ ತಂಡದ ಸದಸ್ಯರು ಧೋತಿ ಧರಿಸಿದ್ದರು.
ಇನ್ನು ಅಂಪೈರ್ ಕೂಡ ಕುರ್ತಾ ಜೊತೆ ಧೋತಿ ಧರಿಸಿ ಶಲ್ಯವನ್ನ ಹೆಗಲ ಮೇಲೆ ಹಾಕಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದ್ರು. ಇದರಲ್ಲಿ ಅನೇಕ ಆಟಗಾರರು ತಿಲಕವನ್ನ ಧರಿಸಿದ್ದೂ ಕಂಡುಬಂತು. ಇದೆಲ್ಲದರ ಜೊತೆಗೆ ಕಮೆಂಟರಿಯನ್ನ ಹಿಂದಿ ಇಲ್ಲವೇ ಇಂಗ್ಲೀಷ್ ಭಾಷೆಯಲ್ಲಿ ನೀಡೋದ್ರ ಬದಲು ಸಂಸ್ಕೃತ ಭಾಷೆಯಲ್ಲಿ ನೀಡಲಾಗಿದೆ. ಮಹರ್ಷಿ ಮಹೇಶ್ ಯೋಗಿಯವರ 104ನೇ ಜನ್ಮದಿನೋತ್ಸವ ಪ್ರಯುಕ್ತ ಭೋಪಾಲ್ನಲ್ಲಿ ಮಹರ್ಷಿ ಕಪ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.