ಶಿವ ತಾಂಡವ ಸ್ತೋತ್ರವನ್ನು ಹೇಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಹಳ ವೈರಲ್ ಆಗಿದ್ದಾರೆ. ಮಧ್ಯ ಪ್ರದೇಶದ ಭೋಜ್ಪುರದ ಕಾಳಿಚರಣ್ ಮಹಾರಾಜ್ ಎಂಬುವವರು ಈ ಸ್ತೋತ್ರವನ್ನು ಪಠಿಸಿದ್ದಾರೆ.
ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಲೇಖಕ ಅಮಿಶ್ ತ್ರಿಪಾಠಿ ಶೇರ್ ಮಾಡಿಕೊಂಡಿದ್ದು, ಅದೀಗ ಮೂರು ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳನ್ನು ಗಿಟ್ಟಿಸಿದೆ.
ಪರಮೇಶ್ವರನ ಪರಮ ಭಕ್ತರಾದ ಇವರ ದನಿಯು ಬಹಳ ಪವರ್‌ಫುಲ್ ಆಗಿದ್ದು, ಭಕ್ತಿಯ ಆಳದಲ್ಲಿ ಅವರಿಂದ ಈ ಪದಗಳು ಹೊಮ್ಮಿವೆ ಎಂದು ತ್ರಿಪಾಠಿ ತಿಳಿಸಿದ್ದಾರೆ.
ಸಂಸ್ಕೃತ ಶ್ಲೋಕವಾದ ಶಿವ ತಾಂಡವ ಸ್ತೋತ್ರವು ಪರಮೇಶ್ವರನ ಬಲ ಹಾಗೂ ಸೌಂದರ್ಯವನ್ನು ವಿವರಿಸುತ್ತದೆ. ಶಿವನ ಪರಮ ಭಕ್ತನಾಗಿದ್ದ ರಾವಣ ಈ ಶ್ಲೋಕವನ್ನು ಭಜಿಸುತ್ತಿದ್ದ ಎಂದು ಹೇಳಲಾಗುತ್ತದೆ.
https://twitter.com/authoramish/status/1283436116239147008?ref_src=twsrc%5Etfw%7Ctwcamp%5Etweetembed%7Ctwterm%5E1283436116239147008%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fpious-powerful-and-pacifying-this-rendition-shiva-tandav-stotram-has-mesmerised-netizens%2F622874
https://twitter.com/authoramish/status/1283436828759076864?ref_src=twsrc%5Etfw%7Ctwcamp%5Etweetembed%7Ctwterm%5E1283436828759076864%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fpious-powerful-and-pacifying-this-rendition-shiva-tandav-stotram-has-mesmerised-netizens%2F622874