alex Certify ಕೊರೊನಾ ಕಾಲರ್​ ಟ್ಯೂನ್​​ಗೆ​ ಅಮಿತಾಭ್​ ಧ್ವನಿ ಬೇಡ ಎಂದು ದೆಹಲಿ ಹೈಕೋರ್ಟ್​ಗೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲರ್​ ಟ್ಯೂನ್​​ಗೆ​ ಅಮಿತಾಭ್​ ಧ್ವನಿ ಬೇಡ ಎಂದು ದೆಹಲಿ ಹೈಕೋರ್ಟ್​ಗೆ ಮನವಿ

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ರ ಧ್ವನಿಯನ್ನ ಹೊಂದಿರುವ ಕೊರೊನಾ ಕಾಲರ್​ ಟ್ಯೂನ್​ನ್ನ ಕೇಂದ್ರ ಸರ್ಕಾರ ತೆಗೆದು ಹಾಕಬೇಕು ಎಂದು ಕೋರಿ ದೆಹಲಿ ಹೈಕೋರ್ಟ್​ ಪಿಐಎಲ್​ ಸಲ್ಲಿಸಲಾಗಿದೆ.

ಪಿಐಎಲ್​ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್​ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್​​ ನೇತೃತ್ವದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿದೆ. ದೆಹಲಿ ನಿವಾಸಿ ಹಾಗೂ ಸಮಾಜ ಸೇವಕ ರಾಕೇಶ್​ ಎಂಬವರು ಸಲ್ಲಿಸಿದ ಅರ್ಜಿ ಇದಾಗಿದೆ.

ದೇಶದಲ್ಲಿ ಅದೆಷ್ಟೂ ಕೊರೊನಾ ವಾರಿಯರ್ಸ್​ ತಮ್ಮ ಸ್ವಂತ ಹಣದಿಂದ ಬಡವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಈ ಕಾಲರ್​ ಟ್ಯೂನ್​ಗೆ ಧ್ವನಿ ನೀಡಿದ್ದಕ್ಕೂ ಕೇಂದ್ರ ಸರ್ಕಾರದಿಂದ ಹಣ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇದು ಮಾತ್ರವಲ್ಲದೇ ಸಮಾಜಕ್ಕೆ ಶುದ್ಧ ಸಂದೇಶ ಸಾರಬೇಕಾದ ಧ್ವನಿಗಾಗಿ ಕೇಂದ್ರ ಸರ್ಕಾರ ಅಮಿತಾಬ್​ರನ್ನ ಆಯ್ಕೆ ಮಾಡಿದೆ. ಆದರೆ ಅಮಿತಾಬ್​ ಶುದ್ಧ ಇತಿಹಾಸವನ್ನ ಹೊಂದಿಲ್ಲ. ಅವರು ಸಮಾಜಕ್ಕೆ ಯಾವುದೇ ಸೇವೆಯನ್ನೂ ನೀಡಿಲ್ಲ. ಮಾತ್ರವಲ್ಲದೇ ಕೆಲ ನ್ಯಾಯಾಲಯಗಳಲ್ಲಿ ಅವರ ವಿರುದ್ಧ ಕೇಸ್​ಗಳೂ ಇವೆ ಎಂದು ಆರೋಪಿಸಲಾಗಿದೆ.

ಹೀಗಾಗಿ ನ್ಯಾಯದ ಹಿತದೃಷ್ಟಿಯನ್ನ ಕಾಪಾಡುವ ಸಲುವಾಗಿ ಮೊಬೈಲ್​ನಿಂದ ಅಮಿತಾಭ್​ ಧ್ವನಿ ಹೊಂದಿರುವ ಕಾಲರ್​ ಟ್ಯೂನ್​ ತೆಗೆದು ಹಾಕಿ ಎಂದು ಅರ್ಜಿದಾರ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...