ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ರ ಧ್ವನಿಯನ್ನ ಹೊಂದಿರುವ ಕೊರೊನಾ ಕಾಲರ್ ಟ್ಯೂನ್ನ್ನ ಕೇಂದ್ರ ಸರ್ಕಾರ ತೆಗೆದು ಹಾಕಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಪಿಐಎಲ್ ಸಲ್ಲಿಸಲಾಗಿದೆ.
ಪಿಐಎಲ್ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿದೆ. ದೆಹಲಿ ನಿವಾಸಿ ಹಾಗೂ ಸಮಾಜ ಸೇವಕ ರಾಕೇಶ್ ಎಂಬವರು ಸಲ್ಲಿಸಿದ ಅರ್ಜಿ ಇದಾಗಿದೆ.
ದೇಶದಲ್ಲಿ ಅದೆಷ್ಟೂ ಕೊರೊನಾ ವಾರಿಯರ್ಸ್ ತಮ್ಮ ಸ್ವಂತ ಹಣದಿಂದ ಬಡವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಈ ಕಾಲರ್ ಟ್ಯೂನ್ಗೆ ಧ್ವನಿ ನೀಡಿದ್ದಕ್ಕೂ ಕೇಂದ್ರ ಸರ್ಕಾರದಿಂದ ಹಣ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದು ಮಾತ್ರವಲ್ಲದೇ ಸಮಾಜಕ್ಕೆ ಶುದ್ಧ ಸಂದೇಶ ಸಾರಬೇಕಾದ ಧ್ವನಿಗಾಗಿ ಕೇಂದ್ರ ಸರ್ಕಾರ ಅಮಿತಾಬ್ರನ್ನ ಆಯ್ಕೆ ಮಾಡಿದೆ. ಆದರೆ ಅಮಿತಾಬ್ ಶುದ್ಧ ಇತಿಹಾಸವನ್ನ ಹೊಂದಿಲ್ಲ. ಅವರು ಸಮಾಜಕ್ಕೆ ಯಾವುದೇ ಸೇವೆಯನ್ನೂ ನೀಡಿಲ್ಲ. ಮಾತ್ರವಲ್ಲದೇ ಕೆಲ ನ್ಯಾಯಾಲಯಗಳಲ್ಲಿ ಅವರ ವಿರುದ್ಧ ಕೇಸ್ಗಳೂ ಇವೆ ಎಂದು ಆರೋಪಿಸಲಾಗಿದೆ.
ಹೀಗಾಗಿ ನ್ಯಾಯದ ಹಿತದೃಷ್ಟಿಯನ್ನ ಕಾಪಾಡುವ ಸಲುವಾಗಿ ಮೊಬೈಲ್ನಿಂದ ಅಮಿತಾಭ್ ಧ್ವನಿ ಹೊಂದಿರುವ ಕಾಲರ್ ಟ್ಯೂನ್ ತೆಗೆದು ಹಾಕಿ ಎಂದು ಅರ್ಜಿದಾರ ಮನವಿ ಮಾಡಿದ್ದಾರೆ.