ಸಾಮಾನ್ಯವಾಗಿ ಐಸ್ಕ್ರೀಂಗಳನ್ನ ಪ್ಲಾಸ್ಟಿಕ್ ಕಪ್ಗಳಲ್ಲಿ ಕೊಡ್ತಾರೆ. ದೊಡ್ಡ ದೊಡ್ಡ ರೆಸ್ಟಾರೆಂಟ್ಗಳಿಗೆ ಹೋದ್ರೆ ಗ್ಲಾಸ್ ಕಪ್ಗಳಲ್ಲಿ ಐಸ್ ಕ್ರೀಂಗಳನ್ನ ಸರ್ವ್ ಮಾಡಲಾಗುತ್ತೆ. ಆದರೆ ಬಾಳೆ ಎಲೆಯಲ್ಲಿ ಐಸ್ ಕ್ರೀಂ ಸರ್ವ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ..?
ಇಂತಹದ್ದೊಂದು ಅಪರೂಪದ ಐಸ್ ಕ್ರೀಂ ಕಪ್ ಸದ್ಯ ಟ್ವಿಟರ್ನಲ್ಲಿ ಸದ್ದು ಮಾಡ್ತಿದೆ. ಪರಿಸರ ಪ್ರಿಯ ಎರಿಕ್ ಸೊಲ್ಹೇಮ್ ಪೋಸ್ಟ್ ಮಾಡಿದ ಐಸ್ ಕ್ರೀಂ ಫೋಟೋದಲ್ಲಿ ಕಪ್ ರೂಪದಲ್ಲಿ ಬಾಳೆ ಗಿಡದ ಎಲೆಯನ್ನ ಬಳಸಲಾಗಿದ್ರೆ ಬಿದಿರಿನಿಂದ ಮಾಡಲಾದ ಚಮಚವನ್ನ ಇಡಲಾಗಿದೆ.
ಭಾರತದಲ್ಲಿ ನಾನು ಇಂತಹದ್ದೊಂದು ಐಸ್ ಕ್ರೀಂ ಕಪ್ ಹಾಗೂ ಚಮಚವನ್ನ ನೋಡಿದೆ. ಇದನ್ನ ನೋಡ್ತಿದ್ರೆ ನಾವು ಪ್ಲಾಸ್ಟಿಕ್ನ್ನ ಬಳಕೆ ಮಾಡೋ ಅಗತ್ಯವೇ ಇಲ್ಲ ಎಂದು ಎನಿಸುತ್ತದೆ ಅಂತಾ ಬರೆದುಕೊಂಡಿದ್ದಾರೆ.
ಇನ್ನು ಈ ಐಸ್ಕ್ರೀಂ ಕಪ್ನ ಫೋಟೋವನ್ನ ಮೊದಲು ಫೇಸ್ಬುಕ್ನ ಇನಿಷಿಯೇಟಿವ್ ಯುನೈಟೆಡ್ ನಾಥ್ ಈಸ್ಟ್ ಫೇಜ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸಣ್ಣ ಪ್ರಯತ್ನವಾದರೂ ಪ್ಲಾಸ್ಟಿಕ್ ಬಳಕೆಯನ್ನ ನಿಲ್ಲಿಸೋಕೆ ಇದು ಉತ್ತಮ ಹೆಜ್ಜೆಯಾಗಿದೆ ಅಂತಾ ಬರೆಯಲಾಗಿದೆ.
ಟ್ವಿಟರ್ನಲ್ಲಿ ಈ ಫೋಟೋಗೆ ಸಾಕಷ್ಟು ಕಮೆಂಟ್ಗಳು ಬಂದಿವೆ. ಕೆಲವರು ಇದು ಕೇರಳದ ಪದ್ಧತಿ ಅಂದರೆ ಇನ್ನೂ ಕೆಲವರು ದೊಡ್ಡ ದೊಡ್ಡ ರೆಸ್ಟಾರೆಂಟ್ಗಳೂ ಇದನ್ನ ಫಾಲೋ ಮಾಡಬೇಕು ಅಂತಾ ಟ್ವೀಟಾಯಿಸಿದ್ದಾರೆ.
https://www.facebook.com/UnitedNE/posts/2657528914297380