alex Certify ವ್ಯಕ್ತಿಯ ಆದಾಯದಲ್ಲಿ ಪತ್ನಿ ಹಾಗೂ ಪೋಷಕರು ಸಮಾನ ಪಾಲುದಾರರು: ನ್ಯಾಯಾಲಯದಿಂದ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯ ಆದಾಯದಲ್ಲಿ ಪತ್ನಿ ಹಾಗೂ ಪೋಷಕರು ಸಮಾನ ಪಾಲುದಾರರು: ನ್ಯಾಯಾಲಯದಿಂದ ಮಹತ್ವದ ತೀರ್ಪು

ಜೀವನಾಂಶದ ವಿಚಾರವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ತೀರ್ಪನ್ನ ಪ್ರಕಟಿಸಿದೆ. ಯಾವುದೇ ವ್ಯಕ್ತಿಯ ಸಂಪಾದನೆಯ ಮೇಲೆ ಕೇವಲ ಆತನ ಪತ್ನಿ ಹಾಗೂ ಮಕ್ಕಳ ಹಕ್ಕು ಮಾತ್ರ ಇರೋದಿಲ್ಲ. ಬದಲಾಗಿ ವೃದ್ಧ ತಂದೆ – ತಾಯಿ ಕೂಡ ಈ ಸಂಪಾದನೆಯ ಹಕ್ಕುದಾರರಾಗಿದ್ದಾರೆ. ಪತ್ನಿ ಹಾಗೂ ಮಗನಂತೆಯೇ ವ್ಯಕ್ತಿಯ ತಂದೆ – ತಾಯಿ ಕೂಡ ಆತನ ಸಂಪಾದನೆಯ ಸಮಾನ ಪಾಲುದಾರರು ಎಂದು ಹೇಳುವ ಮೂಲಕ ಮಹತ್ವದ ತೀರ್ಪನ್ನ ಹೊರಡಿಸಿದೆ.

ತೀಸ್​ ಹಜಾರಿ ಪ್ರಧಾನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಗಿರೀಶ್​ ಕಠ್​ಪಾಲಿಯಾ ಈ ತೀರ್ಪನ್ನ ಪ್ರಕಟಿಸಿದ್ದಾರೆ. ಮಹಿಳೆಯೊಬ್ಬರು ತನ್ನ ಪತಿ ಪ್ರತಿ ತಿಂಗಳು 50 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಅವರ ಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನಾಂಶವನ್ನ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಹಿಳೆಯ ವಾದದ ಪ್ರತಿಯಾಗಿ ಕೋರ್ಟ್​ ಮುಂದೆ ವಾದ ಮಂಡಿಸಿದ ಪತಿ ಪರ ವಕೀಲ ಪತಿಯ ತಿಂಗಳ ಆದಾಯ 37 ಸಾವಿರ ರೂಪಾಯಿ ಇದೆ. ಈ ಹಣದಲ್ಲಿ ಪತ್ನಿ, 2 ವರ್ಷದ ಮಗುವಿನ ಜೊತೆಯಲ್ಲಿ ತನ್ನ ಹಾಗೂ ತನ್ನ ವೃದ್ಧ ಪೋಷಕರ ಖರ್ಚನ್ನೂ ನನ್ನ ಕಕ್ಷಿದಾರರು ಭರಿಸಬೇಕಿದೆ ಎಂದು ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದಾದ ಬಳಿಕ ಕೋರ್ಟ್​ ಪತಿಯ ಆದಾಯವನ್ನ ಪರಿಶೀಲನೆ ನಡೆಸಿದೆ. ಇದರನ್ವಯ ಅವರ ತಿಂಗಳ ಸಂಬಳ 37 ಸಾವಿರ ರೂಪಾಯಿ ಇದೆ ಅನ್ನೋದು ಖಚಿತವಾಗಿದೆ. ಪತಿ, ತಂದೆ – ತಾಯಿಯ ಚಿಕಿತ್ಸೆಗೂ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಅಂಶ ಕೋರ್ಟ್​ಗೆ ತಿಳಿದು ಬಂದಿದೆ. ಆದರೆ ಪತಿಯ ಸಂಬಳದ ಮೇಲೆ ಪತ್ನಿ ಹಾಗೂ ಮಗುವಿಗೆ ಮೊದಲ ಆದ್ಯತೆ ಕೊಡಬೇಕು ಅನ್ನೋದು ಪತ್ನಿ ಪರ ವಕೀಲರ ವಾದವಾಗಿತ್ತು.

ವಾದ – ವಿವಾದಗಳನ್ನ ಆಲಿಸಿದ ಕೋರ್ಟ್​, ಪತಿಯ ಸಂಬಳವನ್ನ 6 ಭಾಗಗಳಾಗಿ ವಿಂಗಡಿಸಿದೆ. ಇದರಲ್ಲಿ 2 ಭಾಗ ಪತಿಗೆ, ಉಳಿದ ನಾಲ್ಕು ಭಾಗವನ್ನ ಪತ್ನಿ, ಮಗು ಹಾಗೂ ತಂದೆ – ತಾಯಿಗೆ ನೀಡಿದೆ. ಇದರಲ್ಲಿ ಪತ್ನಿ ಹಾಗೂ ಮಗು ಇಬ್ಬರಿಗೂ ಸೇರಿ 12 ಸಾವಿರದ ಐದು ನೂರು ರೂಪಾಯಿ ಹಣವನ್ನ ಪ್ರತಿ ತಿಂಗಳ 10ನೇ ತಾರೀಖಿನ ಒಳಗಾಗಿ ನೀಡಬೇಕು ಎಂದು ಕೋರ್ಟ್ ಹೇಳಿದೆ.

ಕೇಕ್​ ಉದಾಹರಣೆಯನ್ನ ನೀಡಿ ತೀರ್ಪನ್ನ ಪ್ರಕಟಿಸಿದ ನ್ಯಾಯಾಧೀಶರು, ಪತಿಯ ಆದಾಯ ಕೇಕ್​ನಂತೆ ಇರುತ್ತೆ. ಅದನ್ನ ಸಮಪಾಲು ಮಾಡಿಕೊಂಡು ತಿನ್ನಬೇಕು ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...