ನವದೆಹಲಿ: ಕೋವಿಡ್ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ರೋಗ ತಡೆ ವ್ಯಾಕ್ಸಿನ್ ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದನ್ನೇ ಕೆಲ ಕ್ರಿಮಿನಲ್ ಗಳು ವಂಚನೆಗೆ ವಸ್ತುವಾಗಿಸಿಕೊಂಡಿರುವ ಸುಳಿವು ಸಿಕ್ಕಿದೆ.
ಭಾರತೀಯ ಗೃಹ ಮಂತ್ರಾಲಯ ಈ ನಿಟ್ಟಿನಲ್ಲಿ ಜನರಿಗೆ ಎಚ್ಚರಿಕೆ ನೀಡಿದೆ ಎಂದು ಸೈಬರ್ ಸುರಕ್ಷೆ ಹಾಗೂ ಜಾಗೃತಿ ಪೋರ್ಟಲ್ ‘ಸೈಬರ್ ದೋಸ್ತ್’ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.
ಕೋವಿಡ್ ಲಸಿಕೆಯನ್ನು ಮೊದಲು ಪಡೆಯಲು ಹಣ ನೀಡಿ ಹಾಗೂ ನೋಂದಣಿ ಮಾಡಿಕೊಳ್ಳಿ ಎಂದು ಕ್ರಿಮಿನಲ್‌ಗಳು ಮೆಸೇಜ್, ಇ ಮೇಲ್ ಅಥವಾ ಫೋನ್ ಕಾಲ್ ಮಾಡಬಹುದು. ಕ್ರಿಮಿನಲ್ ಗಳು ಒಟ್ಟಾಗಿ ವಂಚನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದು ಅಂತಾರಾಷ್ಟ್ರೀಯ ಇಂಟರ್‌ಪೋಲ್ ವಿಷಯವೂ ಆಗಬಹುದು ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.