alex Certify ಲಂಡನ್‌ ಗೆ ಹೋಗಬೇಕಿದ್ದ ಗಿಳಿ ನಾಪತ್ತೆ…! ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್‌ ಗೆ ಹೋಗಬೇಕಿದ್ದ ಗಿಳಿ ನಾಪತ್ತೆ…! ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಯಾರಾದರೂ ಕಳೆದು ಹೋದರೆ ಆ ಸಂಬಂಧ ಪೊಲೀಸ್​ ಠಾಣೆಗಳಲ್ಲಿ ದೂರನ್ನ ದಾಖಲು ಮಾಡಲಾಗುತ್ತದೆ. ಇದೇ ರೀತಿ ಆಲಿಘರ್​ನಲ್ಲೂ ಪೊಲೀಸರು ವಿಚಿತ್ರ ನಾಪತ್ತೆ ಕೇಸ್​ ಒಂದನ್ನ ದಾಖಲು ಮಾಡಿಕೊಂಡಿದ್ದಾರೆ.

ವಿದೇಶಕ್ಕೆ ಹಾರಲು ಸಿದ್ಧವಾಗಿದ್ದ ಬೂದು ಮೈಬಣ್ಣ ಹಾಗೂ ಕೆಂಪು ಪುಕ್ಕದ ಗಿಳಿ ಮಾರ್ಚ್ 2ರಿಂದ ನಾಪತ್ತೆಯಾಗಿದೆ ಎಂದು ದೂರನ್ನ ದಾಖಲಿಸಲಾಗಿದೆ.

ಕ್ವಾರ್ಸಿ ಪೊಲೀಸ್​ ಠಾಣೆಯಲ್ಲಿ ಈ ರೀತಿಯ ದೂರನ್ನ ದಾಖಲಿಸಿಕೊಂಡಿರುವ ಬಗ್ಗೆ ಸರ್ಕಲ್​​ ಆಫೀಸರ್​ ಅನಿಲ್​ ಸಮಾನಿಯಾ ಎಂಬವರು ಅಧಿಕೃತ ಮಾಹಿತಿ ನೀಡಿದ್ದಾರೆ. ದೂರಿನ ಜೊತೆಯಲ್ಲಿ ಗಿಳಿಯ ಫೋಟೋ ಹಾಗೂ ಅದರ ಚಾಕ ಚಾಕ್ಯತೆಗಳ ಬಗ್ಗೆಯೂ ಮಾಲೀಕ ವಿಸ್ತೃತ ವರದಿ ನೀಡಿದ್ದಾರೆ.

ಈ ಪಕ್ಷಿ ಇಂಗ್ಲೀಷ್​ನಲ್ಲಿ ಮಾತನಾಡಬಲ್ಲದು, ಹೆಸರನ್ನ ಹೇಳಬಲ್ಲದು ಹಾಗೂ ವಿಶಲ್​ ಊದಬಲ್ಲದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಾಪತ್ತೆಯಾದ ಗಿಳಿಯು ಕೊನೆಯ ಬಾರಿಗೆ ರಮೇಶ್​ ವಿಹಾರ ರಾಮಘಾಟ್​​ ರಸ್ತೆಯಲ್ಲಿ ಕಾಣಿಸಿಕೊಂಡಿತ್ತು.

ಮಿಠು ಎಂದು ಕರೆದರೆ ಈ ಗಿಳಿ ಪ್ರತಿಕ್ರಿಯಿಸುತ್ತೆ ಎಂದು ಮೂಳೆ ತಜ್ಞ ಡಾ. ಎಸ್​.ಸಿ ವರ್ಶ್ನೆ ಹೇಳಿದ್ದಾರೆ. ಲಂಡನ್​ನಲ್ಲಿ ನೆಲೆಸಿರುವ ವರ್ಶ್ನೆ ಪುತ್ರಿ ಸೌಮ್ಯ ಹಾಗೂ ಅವರ ಪತಿ ರಜತ್​ ಈ ಗಿಳಿಯನ್ನ ತಂದಿದ್ದರು.

ಸೌಮ್ಯ ಪಕ್ಷಿಪ್ರಿಯೆ. ಈಕೆ ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದ ವೇಳೆ ಈ ಆಫ್ರಿಕನ್​ ಗಿಳಿಯನ್ನ ತಂದಿದ್ದಳು ಎಂದು ವರ್ಶ್ನೆ ಹೇಳಿದ್ದಾರೆ.

ಸೌಮ್ಯ ಹಾಗೂ ರಜತ್​ ಲಂಡನ್​ಗೆ ತೆರಳುವ ವೇಳೆ ಮೀಠುವನ್ನ ವರ್ಶ್ನೆ ಬಳಿ ಬಿಡಲಾಗಿತ್ತು. ಸೌಮ್ಯ, ಗಿಳಿಯನ್ನ ಲಂಡನ್​ಗೆ ಕೊಂಡೊಯ್ಯಲು ಬೇಕಾದ ಎಲ್ಲಾ ದಾಖಲೆಗಳನ್ನ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಗಿಳಿ ನಾಪತ್ತೆಯಾಗಿದೆ.

ಈ ಸುದ್ದಿ ಕೇಳಿದ ಸೌಮ್ಯ ಊಟ ತಿಂಡಿ ಬಿಟ್ಟು ಖಿನ್ನತೆಗೆ ಒಳಗಾಗಿದ್ದಾರಂತೆ. ಪಕ್ಷಿ ಪ್ರಿಯೆಯಾಗಿದ್ದ ಸೌಮ್ಯ, ಗಿಳಿಯನ್ನ ಪಂಜರದಲ್ಲಿ ಇಡುತ್ತಿರಲಿಲ್ಲ. ಹೀಗಾಗಿ ಮೀಠು ಮನೆಯ ಸುತ್ತ ಹಾರಾಡುತ್ತಾ ಜೀವನ ಮಾಡುತ್ತಿತ್ತು. ಗಿಳಿಯನ್ನ ಹುಡುಕಿಕೊಟ್ಟವರಿಗೆ ಅಥವಾ ಗಿಳಿಯ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 5 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...