ಕೇವಲ ಸಾಂಕ್ರಮಿಕವಾಗಿ ಉಳಿಯದೇ ಮನುಕುಲ ಎಂದೂ ಮರೆಯದ ಪೀಡೆಯಾಗಿಬಿಟ್ಟಿರುವ ಕೋವಿಡ್-19 ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಕಾಟ ಕೊಡುತ್ತಿದೆ.
ತಮ್ಮ ಪ್ರೀತಿಪಾತ್ರರು ದೂರದ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದಾರೆ ಎಂದು ಜೀರ್ಣಿಸಿಕೊಳ್ಳುವುದು ಎಂಥವರಿಗೂ ಭಾರೀ ಕಷ್ಟದ ಸಂಗತಿ. ಇದೇ ವೇಳೆಯಲ್ಲಿ ಕೋವಿಡ್ ಸೋಂಕಿತರ ಮನಸ್ಸುಗಳನ್ನು ಸಾಧ್ಯವಾದಷ್ಟು ಹಗುರಗೊಳಿಸುವುದು ರೋಗಿಗಳ ಸಂಬಂಧಿಕರ ಮುಂದಿರುವ ಅತಿ ದೊಡ್ಡ ಹೊಣೆಯಾಗಿದೆ.
ಭದ್ರತಾ ಪಡೆಗಳ ಯಶಸ್ವಿ ಕಾರ್ಯಾಚರಣೆ; 6 ಉಗ್ರರು ಎನ್ ಕೌಂಟರ್ ಗೆ ಬಲಿ
ಸೌರಭ್ ತ್ರಿಪಾಠಿ ಹೆಸರಿನ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ಈ ಸ್ಟೋರಿಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ತಮ್ಮ ತಾಯಿಗೆ ಆಕೆಯ ಕುಟುಂಬ ಬರೆದಿರುವ ಹೃದಯಸ್ಪರ್ಶಿ ಪತ್ರವೊಂದು ನೆಟ್ಟಿಗರ ಮನ ಕರಗಿಸುತ್ತಿದೆ.
ಲಭ್ಯವಿಲ್ಲದ ಕೊವ್ಯಾಕ್ಸಿನ್ ಗಾಗಿ ಮುಂದುವರೆದ ಪರದಾಟ: ಸೆಕೆಂಡ್ ಡೋಸ್ ಸಿಗ್ತಿಲ್ಲ, ಫಸ್ಟ್ ಡೋಸ್ ಸದ್ಯಕ್ಕಿಲ್ಲ…!
“ಅಮ್ಮ, ನಾವು ಇಲ್ಲೇ ಕೆಳಗಿದ್ದೇವೆ. ನಿಮ್ಮ ಪರಿಸ್ಥಿತಿ ಸುಧಾರಿಸುತ್ತಿದೆ. ಚಿಂತೆ ಮಾಡಬೇಡಿ. ನಿಮ್ಮನ್ನು ಶೀಘ್ರ ಇಲ್ಲಿಂದ ಕರೆದುಕೊಂಡು ಹೋಗುತ್ತೇವೆ” ಎಂದು ಈ ತಾಯಿಯ ಮಕ್ಕಳಾದ ಬುಲ್‌ಬುಲ್, ಮುನ್‌ಮುನ್, ಗುಡಿಯಾ ಹಾಗೂ ವಿಕಾಸ್ ಬರೆದಿದ್ದಾರೆ.