ಸಿಡಿಲೊಂದು ಬಡಿದ ಕಾರಣಕ್ಕೆ ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ಖರ್ಜೂರದ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಭಾರೀ ವೇಗದಲ್ಲಿ ಗಾಳಿ ಬೀಸುತ್ತಿರುವ ನಡುವೆಯೇ ಮರ ಹೊತ್ತಿ ಉರಿಯುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾಸ್ ಚಂಡಮಾರುತದ ಕಾರಣ ಭಾರೀ ಬಿರುಗಾಳಿ ಹಾಗೂ ಮಳೆಯ ನಡುವೆ ಮರದ ನೆತ್ತಿ ಹೊತ್ತಿ ಉರಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದೇ ವೇಳೆ ಮರದ ಬಳಿ ಎಲೆಕ್ಟ್ರಿಕ್ ವೈರ್ಗಳು ನೇತಾಡುತ್ತಿರುವುದನ್ನು ಕಾಣಬಹುದಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸ್ಥಳದಲ್ಲಿ ಮಳೆಯಾಗುತ್ತಿದ್ದ ಕಾರಣ ಆ ಸಮಯ ಅಲ್ಲಿ ಯಾರೂ ಇರಲಿಲ್ಲ. ಚಂಡಮಾರುತದ ಕಾರಣ ಬಿಹಾರದ ಅನೇಕ ಜಾಗಗಳಲ್ಲಿ ಭಾರೀ ಮಳೆಯಾಗಿದೆ.
https://arynews.tv/en/cyclone-yaas-viral-video-palm-tree-lightning-strike-bihar/