ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ತಯಾರಾಗುತ್ತಿರುವ ಕೊರೊನಾ ಲಸಿಕೆ ವೃದ್ಧರಿಗೂ ಸಹ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿದೆ ಅಂತಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಆದರ್ ಪೂನವಾಲಾ ಹೇಳಿದ್ದಾರೆ.
ಕೋವಿಶೀಲ್ಡ್ ಲಸಿಕೆ ತುಂಬಾನೇ ಸುರಕ್ಷಿತವಾಗಿದೆ. ಈಗಾಗಲೇ ಭಾರತ ಹಾಗೂ ವಿದೇಶಗಳಲ್ಲಿನ ಸಾವಿರಾರು ಜನರಿಗೆ ಈ ಲಸಿಕೆಯ ಪ್ರಯೋಗ ಮಾಡಲಾಗಿದ್ದು ಒಳ್ಳೆಯ ಫಲಿತಾಂಶವೇ ಬಂದಿದೆ. ಆದರೆ ಈ ಲಸಿಕೆ ವೃದ್ಧರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅನ್ನೋ ಭಯ ನಮ್ಮಲ್ಲಿ ಕಾಡುತ್ತಿತ್ತು. ಆದರೆ ವೃದ್ಧರಿಗೂ ಸಹ ಈ ಲಸಿಕೆ ಸುರಕ್ಷಿತ ಅಂತಾ ಪ್ರಯೋಗದಲ್ಲಿ ಬಹುಪಾಲು ಸಾಬೀತಾಗಿದೆ ಅಂತಾ ಹೇಳಿದ್ರು.
ಅಲ್ಲದೇ ಈ ಲಸಿಕೆ ಸುರಕ್ಷತೆ ಬಗ್ಗೆಯೂ ಮಾತನಾಡಿದ ಅವ್ರು, ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನೋದನ್ನ ಸಂಪೂರ್ಣವಾಗಿ ಅಳೆಯಬೇಕು ಅಂದರೆ ಕನಿಷ್ಟ 2 ವರ್ಷಗಳಂತೂ ಬೇಕಾಗಬಹುದು. ಲಸಿಕೆ ತೆಗೆದುಕೊಂಡು ಕೊರೊನಾದಿಂದ ಪಾರಾದ ವ್ಯಕ್ತಿಯ ಆರೋಗ್ಯ ಮುಂದಿನ ದಿನಗಳಲ್ಲಿ ಹೇಗಿರುತ್ತೆ ಅನ್ನೋದನ್ನ ಆಧರಿಸಿ ಇದರ ಸುರಕ್ಷತೆ ಬಗ್ಗೆ ನಿರ್ಧಾರ ಮಾಡಬೇಕಾಗುತ್ತೆ ಅಂತಾ ಹೇಳಿದ್ದಾರೆ.