alex Certify ಡಿಸೆಂಬರ್​ ಆರಂಭದಲ್ಲಿ ಸಿಗಲಿದ್ಯಾ ಕೊರೊನಾ ಲಸಿಕೆ..? ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್​ ಆರಂಭದಲ್ಲಿ ಸಿಗಲಿದ್ಯಾ ಕೊರೊನಾ ಲಸಿಕೆ..? ಇಲ್ಲಿದೆ ಮುಖ್ಯ ಮಾಹಿತಿ

Coronavirus vaccine: India sets aside $7 billion to vaccinate its population: Sources | India News - Times of India

ಭಾರತದ ಸೀರಮ್​ ಇನ್ಸ್ಟಿಟ್ಯೂಟ್​ ತಯಾರು ಮಾಡ್ತಿರುವ ಆಕ್ಸ್​ಫರ್ಡ್​ ಕೊರೊನಾ ಲಸಿಕೆ ಡಿಸೆಂಬರ್​ ತಿಂಗಳ ಆರಂಭ ಅಥವಾ 2021ರ ಮೂರನೇ ತ್ರೈಮಾಸಿಕದ ವೇಳೆಗೆ 100 ಮಿಲಿಯನ್​ ಡೋಸ್​​ಗಳ ಮೊದಲ ಬ್ಯಾಚ್​ ತಯಾರಾಗಬಹುದು ಅಂತಾ ಪುಣೆ ಮೂಲದ ಕಂಪನಿ ಮುಖ್ಯಸ್ಥ ಆದತ್​ ಪೂನಾವಾಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವು ತುರ್ತು ಪರವಾನಗಿ ಪಡೆಯದೇ ಇದ್ದರೆ, ಡಿಸೆಂಬರ್​ ವೇಳೆಗೆ ನಮ್ಮ ಪ್ರಯೋಗಗಳೆಲ್ಲ ಯಶಸ್ವಿಯಾಗಬೇಕು ಹಾಗೂ ಜನವರಿ ವೇಳೆಗೆ ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಪ್ರಾರಂಭವಾಗಬಹುದು ಅಂತಾ ಹೇಳಿದ್ದಾರೆ.

ಮುಂದಿನ ಎರಡು ವಾರಗಳಲ್ಲಿ ಯುಕೆಯ ಜೊತೆ ಲಸಿಕೆ ಸಂಬಂಧ ಕೈಗೊಳ್ಳಲಾದ ಅಧ್ಯಯನಗಳ ಮಾಹಿತಿಯನ್ನ ಹಂಚಿಕೊಳ್ಳಲಿದ್ದೇವೆ. ಈ ಎಲ್ಲಾ ಮಾಹಿತಿ ಸುರಕ್ಷಿತವಾಗಿದೆ ಅಂದರೆ ಲಸಿಕೆಯನ್ನ ಬಳಕೆ ಮಾಡಲು ತುರ್ತು ಪರವಾನಿಗೆ ಬೇಕು ಅಂತಾ ಅರ್ಜಿ ಸಲ್ಲಿಕೆ ಮಾಡಬಹುದು ಅಂತಾ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...