ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ್ ನಿರ್ಮಾಣಕ್ಕೆ ಕರೆ ನೀಡಿದ್ದರು. ಇದೀಗ ಈ ಆತ್ಮ ನಿರ್ಭರತಾ ಶಬ್ದಕ್ಕೆ 2020ರ ಹಿಂದಿಯ ಪ್ರಖ್ಯಾತ ಶಬ್ದ ಎಂಬ ಹಿರಿಮೆಯನ್ನ ಆಕ್ಸ್ಫರ್ಡ್ ನೀಡಿದೆ.
ಸಲಹಾ ಟೀಂನಲ್ಲಿದ್ದ ಭಾಷಾ ತಜ್ಞೆ ಕೃತಿಕಾ ಅಗರ್ವಾಲ್, ಪೂನಂ ನಿಗಮ್ ಸಹಾಯ್ ಹಾಗೂ ಇಮೊಗನ್ ಫಾಕ್ಸ್ವೆಲ್ ಈ ಶಬ್ದವನ್ನ ಆಯ್ಕೆ ಮಾಡಿದ್ದಾರೆ,
ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸ್ವಾವಲಂಬಿ ದೇಶ ನಿರ್ಮಾಣಕ್ಕಾಗಿ ಆತ್ಮನಿರ್ಭರ್ ಭಾರತ್ ಎಂದು ಕರೆ ನೀಡಿದ್ದರು. ಇದಾದ ಬಳಿಕ ಭಾರತದಲ್ಲಿ ಈ ಶಬ್ದವನ್ನ ಹೆಚ್ಚಾಗಿ ಬಳಕೆ ಮಾಡಲಾಗಿದೆ ಎಂದು ಆಕ್ಸ್ಫರ್ಡ್ ಹೇಳಿದೆ.