ಲಾಕ್ ಡೌನ್ 4 ಮೇ 31ರಂದು ಮುಗಿಯಲಿದೆ. ಲಾಕ್ ಡೌನ್ 5 ಹೇಗಿರಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.
ಒಂದೆಡೆ ಲಾಕ್ ಡೌನ್ ಸಡಿಲವಾಗ್ತಿದ್ದು ಇನ್ನೊಂದು ಕಡೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಈ ಮಧ್ಯೆ ಲಾಕ್ ಡೌನ್ 5ರಲ್ಲಿ ಇನ್ಯಾವ ಸೇವೆಗೆ ವಿನಾಯಿತಿ ಸಿಗಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೋದಿ ಮಾತುಕತೆ ನಡೆಸುತ್ತಾರೆ. ಪ್ರಧಾನಿ ನಿವಾಸದಲ್ಲಿ ಈಗ ಕೇಂದ್ರ ಸಚಿವ ಅಮಿತ್ ಷಾ ಜೊತೆ ಮಹತ್ವದ ಸಭೆ ನಡೆಯುತ್ತಿದೆ. ಅಮಿತ್ ಶಾ ಗುರುವಾರ ಸಂಜೆ ಎಲ್ಲ ಸಿಎಂಗಳ ಜೊತೆ ಮಾತುಕತೆ ನಡೆಸಿದ್ದರು.
ಪ್ರತಿ ಭಾರಿ ಲಾಕ್ ಡೌನ್ ಕೊನೆ ಹಂತದಲ್ಲಿ ಪಿಎಂ, ಎಲ್ಲ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದರು. ಆದ್ರೆ ಈ ಬಾರಿ ಇನ್ನೂ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅಮಿತ್ ಶಾ ಮಾತುಕತೆ ನಡೆಸಿದ್ದು, ಅವ್ರಿಂದ ಮಾಹಿತಿ ಪಡೆದು ಮೋದಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.