alex Certify ಉಚಿತ ಮೊಬೈಲ್ ನೀಡಲು ಬೇಡಿಕೆಯಿಟ್ಟವನಿಗೆ ಬಂಪರ್ ಗಿಫ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ಮೊಬೈಲ್ ನೀಡಲು ಬೇಡಿಕೆಯಿಟ್ಟವನಿಗೆ ಬಂಪರ್ ಗಿಫ್ಟ್…!

OnePlus Just Promised an Indian Man a New Smartphone if He Got 1 Million ' Likes' on Twitter

ಎಲ್ಲರೂ ತಮ್ಮ ಕೈಯ್ಯಲ್ಲಿ ಪ್ರಸಿದ್ಧ ಕಂಪನಿಯ ಹೈ ಎಂಡ್ ನ ಸ್ಮಾರ್ಟ್ ಫೋನ್ ಇರಬೇಕು ಎಂದು ಬಯಸುತ್ತಾರೆ. ಆದರೆ, ಎಷ್ಟು ಜನರಿಗೆ ಆ ಅದೃಷ್ಟ ದೊರೆಯುತ್ತದೆ‌. ಭಾರತದ ಯುವಕನಿಗೆ ಪ್ರಸಿದ್ಧ ಸ್ಮಾರ್ಟ್ ಫೋನ್ ಕಂಪನಿ ಹೀಗೊಂದು ಆಫರ್ ನೀಡಿದೆ.

ಒನ್ ಪ್ಲಸ್ ಅಧಿಕೃತ ಟ್ವಿಟರ್ ‌ಹ್ಯಾಂಡಲ್ ಗೆ ಮೆಸೇಜ್ ಮಾಡಿ ಚಾಟ್ ಮಾಡಿದ ಧನುಷ್ ಎಂಬ ಯುವಕನಿಗೆ ಟ್ವಿಟರ್ ಚಾಟ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿ 1 ಲಕ್ಷ ಲೈಕ್ ಬಂದರೆ ಉಚಿತವಾಗಿ ಒನ್ ಪ್ಲಸ್ 8ಟಿ ಮೊಬೈಲ್ ನೀಡುವುದಾಗಿ ಆ ಕಂಪನಿ ಆಫರ್ ನೀಡಿದೆ. ಆತ ಅದೇ ರೀತಿ ಮಾಡಿದ್ದು, ಇದುವರೆಗೆ 129 ಸಾವಿರ ಎಂದರೆ‌ 1 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಕಂಪನಿ ಮಾತಿನಂತೆ ಫೋನ್ ಕೊಡುತ್ತಾ ಕಾದು ನೋಡಬೇಕು.‌

ಹಾಗಿದ್ದರೆ ಕಂಪನಿ ಹಾಗೂ ಆತನ ನಡುವೆ ಟ್ವಿಟರ್ ನಲ್ಲಿ ನಡೆದ ಸಂಭಾಷಣೆ ಏನು…? “ಎರಡು ದಿನದ ಹಿಂದೆ ನನ್ನ 20 ನೇ ವರ್ಷದ ಹುಟ್ಟು ಹಬ್ಬವಾಯಿತು. ನನಗೆ ಫೋನ್ ಕೊಳ್ಳಲು ಸಾಧ್ಯವಾಗಿಲ್ಲ.‌ ಒನ್‌ ಪ್ಲಸ್ ಒಂದು ಫೋನ್ ಉಚಿತವಾಗಿ ನೀಡುತ್ತೀರಾ” ಎಂದು ಧನುಷ್ ಕೇಳಿದ್ದಾನೆ. ಒನ್ ಪ್ಲಸ್ ಚಾಲೆಂಜ್ ಹಾಕಿದೆ. ಆತ ಅದನ್ನು ಕಂಪನಿ ಸಿಇಒ ಪೆಟೆ ಲೂ ಅವರಿಗೂ ಟ್ಯಾಗ್ ಮಾಡಿದ್ದಾನೆ.‌ “ಕೆಲವರು ದುಡಿದು ಮೊಬೈಲ್ ಖರೀದಿಸು ಮಾರಾಯ” ಎಂದು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...