ಸಾಮಾಜಿಕ ಅಂತರ ಕಾಪಾಡೋದು ಹಾಗೂ ಮಾಸ್ಕ್ಗಳ ಬಳಕೆ ಕೊರೊನಾದಿಂದ ಪಾರಾಗಲು ತೆಗೆದುಕೊಳ್ಳಲುಬೇಕಾದ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಲವ್ ಅಗರ್ವಾಲ್ ಸಾಮಾಜಿಕ ಅಂತರ ಪಾಲನೆ ಮಾಡದ ಹಿನ್ನೆಲೆ ಕೋವಿಡ್ ಪಾಸಿಟಿವ್ ಕೇಸ್ಗಳು ಹೆಚ್ಚಾಗಿವೆ. ಸಾಮಾಜಿಕ ಅಂತರ ಪಾಲನೆ ಮಾಡದ ಕೊರೊನಾ ಸೋಂಕಿತ ವ್ಯಕ್ತಿ 30 ದಿನಗಳಲ್ಲಿ ಬರೋಬ್ಬರಿ 406 ಮಂದಿಗೆ ಸೋಂಕನ್ನ ಹರಡಬಲ್ಲ ಸಾಮರ್ಥ್ಯ ಹೊಂದಿರುತ್ತಾನೆ ಎಂದು ಹೇಳಿದ್ದಾರೆ.
ಆದರೆ ಸೋಂಕಿತ ವ್ಯಕ್ತಿ 30 ದಿನಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳೋದನ್ನ ಕೇವಲ 50 ಪ್ರತಿಶತ ಕಡಿಮೆ ಮಾಡಿದ್ರೂ ಸಹ ಈ 406 ಸಂಖ್ಯೆ 15ಕ್ಕೆ ಇಳಿಕೆ ಆಗಬಹುದು. ಅದೇ ಆತ 75 ಪ್ರತಿಶತ ಕಡಿಮೆ ಮಾಡಿದ್ರೆ ಕೇವಲ 2 ಮಂದಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತೆ ಎಂದು ಅಗರ್ವಾಲ್ ಹೇಳಿದ್ರು.
ನಾವು ಆರು ಅಡಿ ಅಂತರವನ್ನ ಕಾಪಾಡೋದನ್ನ ರೂಢಿ ಮಾಡಿಕೊಂಡರೆ ಕೋವಿಡ್ 19 ಬರುವ ಸಾಧ್ಯತೆ ತುಂಬಾನೇ ಕಡಿಮೆ. ನೀವು ಮಾಸ್ಕ್ಗಳನ್ನ ಸರಿಯಾದ ರೀತಿಯಲ್ಲಿ ಬಳಕೆ ಮಾಡದೇ ಇದ್ದಲ್ಲಿ ಸೋಂಕಿತ ವ್ಯಕ್ತಿ ಇನ್ನೊಬ್ಬರಿಗೆ ವೈರಸ್ ಹರಡುವ ಪ್ರಮಾಣ 90 ಪ್ರತಿಶತ ಇರಲಿದೆ ಎಂದು ಹೇಳಿದ್ರು.