ಪಿಎಂ ಕೇರ್ ಫಂಡ್ನಿಂದ ದೇಶದಲ್ಲಿ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕಗಳ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ಅಸ್ತು ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಗಳ ಸಂಗ್ರಹ ಹೆಚ್ಚಿಸಲು ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯ್ತು.
ಈ ವೇಳೆ ಪ್ರಧಾನಿ ಮೋದಿ ಆದಷ್ಟು ಬೇಗ ಆಮ್ಲಜನಕ ಸಾಂದ್ರಕಗಳನ್ನ ಸಂಗ್ರಹಿಸಿ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಆಮ್ಲಜನಕ್ಕೆ ಅಭಾವವಿದೆಯೋ ಅಲ್ಲಿಗೆ ಕಳುಹಿಸಿಕೊಡಿ ಎಂದು ಸೂಚನೆ ನೀಡಿದ್ದಾರೆ.
ಈ ಹಿಂದೆ ಪಿಎಂ ಕೇರ್ ಫಂಡ್ನಿಂದ 750 ಪಿಎಸ್ಎ ಪ್ಲಾಂಟ್ಗಳು ಹಾಗೂ 500 ಹೊಸ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ್ದರು. ಈ ಬಗ್ಗೆ ಸ್ವತಃ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದರು.
ಆಮ್ಲಜನಕ ಸಿಲಿಂಡರ್ಗಳ ಕೊರತೆ ಉಂಟಾಗುತ್ತಿದ್ದಂತೆಯೇ ಆಮ್ಲಜನಕ ಸಾಂದ್ರಕಗಳಿಗೆ ಮೊರೆ ಹೋಗಲಾಗುತ್ತೆ. ಇದು ಒಂದು ವೈದ್ಯಕೀಯ ಸಾಧನವಾಗಿದ್ದು ವಾಯುಮಂಡಲದಿಂದ ಗಾಳಿಯನ್ನ ಸಂಗ್ರಹಿಸುವ ಕೆಲಸ ಮಾಡುತ್ತದೆ. ಬಳಿಕ ಸಾರಜನಕವನ್ನ ಗಾಳಿಯಲ್ಲೇ ವಾಪಸ್ ಬಿಡುತ್ತದೆ. ಹಾಗೂ ಕೇವಲ ಆಮ್ಲಜನಕವನ್ನ ಸಂಗ್ರಹಿಸಿಕೊಳ್ಳುತ್ತದೆ. ಇದರಲ್ಲಿ ಆಮ್ಲಜನಕ 85 ಪ್ರತಿಶತ ಶುದ್ಧವಾಗೇ ಇರೋದ್ರಿಂದ ತೀರಾ ಗಂಭೀರ ಲಕ್ಷಣಗಳನ್ನ ಹೊಂದಿರದ ಕೋವಿಡ್ 19 ರೋಗಿಗಳು ಬಳಕೆ ಮಾಡಬಹುದಾಗಿದೆ.