alex Certify ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….!

ಪ್ರಯತ್ನ ಮಾಡುವವರಿಗೆ ಸೂಕ್ತ ಫಲ ಸಿಕ್ಕೇ ಸಿಗುತ್ತೆ ಎಂಬ ಮಾತು ಅಕ್ಷರಶಃ ಸತ್ಯ. ಈ ಮಾತನ್ನ ಸಾಯೇರ್​ ಅಬ್ದುಲ್ಲಾ ಹೇಲಿಂಗ್​ ಎಂಬವರು ಇದೀಗ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಜಮ್ಮು & ಕಾಶ್ಮೀರದ ಸಾಯೇರ್​ ತಮ್ಮ 11ನೇ ವಯಸ್ಸಿನಲ್ಲಿ ಅಪಘಾತಕ್ಕೀಡಾದ ಪರಿಣಾಮ ಬಲಗೈಯನ್ನ ಕಳೆದುಕೊಂಡಿದ್ದಾರೆ. ಶಾಲಾ ಬಸ್​ನ್ನು ಹತ್ತುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು ಪರಿಣಾಮ ಸಾಯೇರ್​ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವಂತಾಯ್ತು.

ಒಂದು ಕೈ ಇಲ್ಲದೇ ಇದ್ದರೂ ಸಹ ಸಾಯೇರ್​ ಕನಸು ಕಾಣೋದನ್ನ ನಿಲ್ಲಿಸಿರಲಿಲ್ಲ. ವಾಹನ ಚಾಲನೆಯಲ್ಲಿ ಭಾರೀ ಆಸಕ್ತಿ ಹೊಂದಿದ್ದ ಸಾಯೇರ್​ಗೆ ಅಂಗವೈಕಲ್ಯ ಅನ್ನೋದು ಅಡ್ಡಿ ಎನಿಸಲೇ ಇಲ್ಲ.

ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ

ಸಾಯೇರ್​ ಒಂದೇ ಕೈನಲ್ಲೇ ವಾಹನ ಚಲಾಯಿಸೋದನ್ನ ಕಲಿತಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಅವ್ರು, ಬಾಲ್ಯದಿಂದಲೇ ನಾನು ವಾಹನ ಚಾಲನೆ ಬಗ್ಗೆ ಆಕರ್ಷಣೆ ಹೊಂದಿದ್ದೆ. ಇದನ್ನ ನಾನೊಂದು ಸವಾಲಾಗಿ ಸ್ವೀಕರಿಸಿದೆ ಹಾಗೂ ನಾನೀಗ ಒಂದೇ ಕೈನಲ್ಲಿ ಎಷ್ಟು ದೂರ ಬೇಕಿದ್ದರೂ ಡ್ರೈವ್​ ಮಾಡಬಲ್ಲೆ ಎಂದು ಹೇಳಿದ್ರು.

ವಾಹನ ಚಾಲನೆ ಮೇಲಿದ್ದ ಆಸಕ್ತಿಯನ್ನೇ ಸಾಧನೆಯಾಗಿ ಬದಲಾಯಿಸಬೇಕು ಅನ್ನೋದು ಸಾಯೇರ್​ ಕನಸಾಗಿತ್ತು. ಇದೇ ಸಮಯದಲ್ಲಿ ಸಾಯೇರ್​ ಕಾಶ್ಮೀರ್ ಆಫ್​ ರೋಡ್​ ಎಂಬ ಗುಂಪಿನ ಬಗ್ಗೆ ತಿಳಿದುಕೊಂಡ್ರು. ಈ ಗುಂಪಿನ ಜೊತೆ ಸೇರಿ ಸಾಯೇರ್​ ಪರ್ವತ, ಗುಡ್ಡ ಗಾಡು ಪ್ರದೇಶಗಳಲ್ಲಿ ಸಾಹಸದ ವಾಹನ ಚಲಾವಣೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...