ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ವಾಹನ ತಡೆಯಲು ಹೋದ ಟ್ರಾಫಿಕ್ ಪೊಲೀಸ್ಗೆ ಕಾರು ಗುದ್ದಿದ ಘಟನೆ ಜೈಪುರದಲ್ಲಿ ನಡೆದಿದೆ.
ಕಾರು ಗುದ್ದಿದ ರಭಸಕ್ಕೆ ಪೊಲೀಸ್ ಬಾನೆಟ್ ಮೇಲೆ ಜಿಗಿದಿದ್ದು ಕಾರು 2 ಕಿಲೋಮೀಟರ್ಗೆ ಪೊಲೀಸ್ನನ್ನ ಎಳೆದುಕೊಂಡು ಹೋಗಿದೆ.
ಓವರ್ ಸ್ಪೀಡ್ನಲ್ಲಿ ಬರ್ತಿದ್ದ ಕಾರನ್ನ ಕೃಷ್ಣ ಕುಮಾರ್ ಎಂಬ ಪೊಲೀಸ್ ತಡೆಯಲು ಹೋಗಿದ್ದಾರೆ. ಆದ್ರೆ 82 ಕಿಲೋಮೀಟರ್ ಪರ್ ಅವರ್ನಲ್ಲಿದ್ದ ಕಾರು ಪೊಲೀಸ್ಗೆ ಗುದ್ದಿದೆ. ಹೀಗಾಗಿ ಬಾನೆಟ್ ಹಿಡಿದುಕೊಂಡಿದ್ದ ಕಾನ್ಸ್ಟೇಬಲ್ 2 ಕಿಲೋಮೀಟರ್ಗೆ ವರೆಗೆ ಕಾರ್ ಜೊತೆ ಹೋಗಿದ್ದಾರೆ.
ದೆಹಲಿಯಲ್ಲೂ ಇದೇ ರೀತಿಯ ಘಟನೆಯಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು 400 ಕಿಲೋಮೀಟರ್ಗೆ ಹೋಗಿ ಬಳಿಕ ಆಯತಪ್ಪಿ ಬಿದ್ದಿದ್ದರು. ಈ ಎರಡೂ ಘಟನೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.