
ಸಕ್ಕಾರ್ದರಾ ಸ್ಕ್ವೇರ್ನಲ್ಲಿ ಈ ಘಟನೆ ಸಂಭವಿಸಿದ್ದು ಕಾರು ಚಾಲಕ ಆಕಾಶ್ ಚವನ್ನ್ನು ಪೊಲೀಸರು ಬಂಧಿಸಿದ್ದಾರೆ.
ಟ್ರಾಫಿಕ್ ಠಾಣೆ ಕಾನ್ಸ್ಟೇಬಲ್ ಅಮೋಲ್ ಚಿದಂವರ್ ಎಂಬವರು ಎಂದಿನಂತೆ ಸಂಚಾರ ದಟ್ಟಣೆ ನಿಯಂತ್ರಿಸುವ ಕೆಲಸ ಮಾಡುತ್ತಿದ್ದರು.
ಸಂಜೆ 5 ಗಂಟೆ ಸುಮಾರಿಗೆ ಕಪ್ಪು ಬಣ್ಣದ ಗ್ಲಾಸನ್ನ ಹೊಂದಿದ್ದ ಕಾರನ್ನ ಪೇದೆ ಗುರುತಿಸಿದ್ದಾರೆ. ಆದರೆ ಕಾರು ಚಾಲಕ ಕಾರು ನಿಲ್ಲಿಸುವ ಬದಲು ಪೇದೆಗೆ ಕಾರನ್ನ ಗುದ್ದಿ ಮುಂದೆ ಹೋಗಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಪೇದೆ ಕಾರಿನ ಬ್ಯಾನೆಟ್ ಮೇಲೆ ಏರಿ ಅರ್ಧ ಕಿಲೋಮೀಟರ್ ಮುಂದೆ ಹೋಗಿದ್ದಾರೆ.