alex Certify ಅಡ್ಡಗಟ್ಟಿದ ಟ್ರಾಫಿಕ್​ ಪೇದೆಯನ್ನು ಬಾನೆಟ್‌ ಮೇಲೆ ಎಳೆದೊಯ್ದ ಕಾರು ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡ್ಡಗಟ್ಟಿದ ಟ್ರಾಫಿಕ್​ ಪೇದೆಯನ್ನು ಬಾನೆಟ್‌ ಮೇಲೆ ಎಳೆದೊಯ್ದ ಕಾರು ಚಾಲಕ

ವೇಗವಾಗಿ ಬಂದ ಕಾರೊಂದು ಟ್ರಾಫಿಕ್​ ಪೊಲೀಸನನ್ನ ಕಾರಿನ ಬಾನೆಟ್​ ಮೇಲೆ ಸುಮಾರು ಅರ್ಧ ಕಿಲೋಮೀಟರ್​ವರೆಗೆ ಎಳೆದೊಯ್ದ ಘಟನೆ ನಾಗ್ಪುರದಲ್ಲಿ ನಡೆದಿದೆ. ಕಾರು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಕಾರು ಚಾಲಕ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ

ಸಕ್ಕಾರ್ದರಾ ಸ್ಕ್ವೇರ್​​ನಲ್ಲಿ ಈ ಘಟನೆ ಸಂಭವಿಸಿದ್ದು ಕಾರು ಚಾಲಕ ಆಕಾಶ್​​ ಚವನ್​ನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರಾಫಿಕ್​ ಠಾಣೆ ಕಾನ್ಸ್​​ಟೇಬಲ್​​ ಅಮೋಲ್​ ಚಿದಂವರ್​​ ಎಂಬವರು ಎಂದಿನಂತೆ ಸಂಚಾರ ದಟ್ಟಣೆ ನಿಯಂತ್ರಿಸುವ ಕೆಲಸ ಮಾಡುತ್ತಿದ್ದರು.

ಸಂಜೆ 5 ಗಂಟೆ ಸುಮಾರಿಗೆ ಕಪ್ಪು ಬಣ್ಣದ ಗ್ಲಾಸನ್ನ ಹೊಂದಿದ್ದ ಕಾರನ್ನ ಪೇದೆ ಗುರುತಿಸಿದ್ದಾರೆ. ಆದರೆ ಕಾರು ಚಾಲಕ ಕಾರು ನಿಲ್ಲಿಸುವ ಬದಲು ಪೇದೆಗೆ ಕಾರನ್ನ ಗುದ್ದಿ ಮುಂದೆ ಹೋಗಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಪೇದೆ ಕಾರಿನ ಬ್ಯಾನೆಟ್​ ಮೇಲೆ ಏರಿ ಅರ್ಧ ಕಿಲೋಮೀಟರ್​ ಮುಂದೆ ಹೋಗಿದ್ದಾರೆ.

(Video Courtesy: Nagpur Police) pic.twitter.com/uZjB6JnYSB

— ANI (@ANI) November 30, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...