alex Certify ʼಅಂದಾಜ್‌ ಅಪ್ನಾ ಅಪ್ನಾʼ ಚಿತ್ರಕ್ಕೆ 26 ವರ್ಷ…! ಪೋಸ್ಟರ್ ಬಳಸಿಕೊಂಡ ಪೊಲೀಸರಿಂದ ಮಾಸ್ಕ್‌ ಜಾಗೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಂದಾಜ್‌ ಅಪ್ನಾ ಅಪ್ನಾʼ ಚಿತ್ರಕ್ಕೆ 26 ವರ್ಷ…! ಪೋಸ್ಟರ್ ಬಳಸಿಕೊಂಡ ಪೊಲೀಸರಿಂದ ಮಾಸ್ಕ್‌ ಜಾಗೃತಿ

ಟ್ವಿಟರ್ ಬಳಕೆ ಮಾಡುವ ಪೊಲೀಸ್​ ಇಲಾಖೆ ಇದನ್ನ ಜನತೆಗೆ ಸಾಮಾಜಿಕ ಸಂದೇಶ ರವಾನಿಸುವ ವೇದಿಕೆಯನ್ನಾಗಿ ಮಾಡಿಕೊಂಡಿವೆ. ಅದರಲ್ಲೂ ಮುಂಬೈ ಹಾಗೂ ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಸಂದೇಶಗಳನ್ನ ರವಾನಿಸುವಲ್ಲಿ ಎತ್ತಿದ ಕೈ.

ಇದೀಗ ಆಸ್ಸಾಂ ಪೊಲೀಸರು ಬಾಲಿವುಡ್​ ಸಿನಿಮಾದ ಪೋಸ್ಟರ್​ ಒಂದನ್ನ ಬಳಸಿಕೊಂಡು ಮಾಸ್ಕ್​​ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟ್​ ಒಂದನ್ನ ಶೇರ್​ ಮಾಡಿದ್ದಾರೆ. ಸಲ್ಮಾನ್​ ಖಾನ್​ ಹಾಗೂ ಆಮೀರ್​ ಖಾನ್​ ಅಭಿನಯದ ಚಿತ್ರ ಅಂದಾಜ್​ ಅಪ್ನಾ ಅಪ್ನಾ ಪೋಸ್ಟರ್​​ನಲ್ಲಿ ನಟರಿಬ್ಬರ ಮುಖಕ್ಕೆ ಮಾಸ್ಕ್​ ಹಾಕಿಸುವ ಮೂಲಕ ಮಾಸ್ಕ್​ ಅಪ್ನಾ ಅಪ್ನಾ ಅಂತಾ ಹೇಳಿದ್ದಾರೆ ಅಸ್ಸಾಂ ಪೊಲೀಸರು.

ಗೆಳೆಯರು ಮಾಸ್ಕ್​ ಹಾಕಿಕೊಂಡು ಮನೆಯಿಂದ ಹೊರಗೆ ಹೋಗ್ತಾರೆ ಅಂದ್ರೆ ಇದಕ್ಕಿಂತ ಸುರಕ್ಷತೆ ಮತ್ತೊಂದೇನಿದೆ ಅಂತಾ ಕ್ಯಾಪ್ಶನ್​ ಬೇರೆ ಹಾಕಲಾಗಿದೆ. ಇನ್ನೊಂದು ಕುತೂಹಲಕಾರಿ ಅಂಶ ಅಂದ್ರೆ ಅಂದಾಜ್​ ಅಪ್ನಾ ಅಪ್ನಾ ಸಿನಿಮಾ ಇಂದಿಗೆ 24ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...