
ರಫೇಲ್ ಜೆಟ್‌ಗಳು ಭಾರತಕ್ಕೆ ಆಗಮಿಸುತ್ತಲೇ, ದೇಶವಾಸಿಗಳ ಮನದಲ್ಲಿ ಅವುಗಳದ್ದೇ ಭಜನೆಯಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಫೇಲ್ ಜೆಟ್‌ಗಳು ಸೆಲೆಬ್ರಿಟಿಗಳಾಗಿಬಿಟ್ಟಿವೆ.
ಇದೇ ವೇಳೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ರಫೇಲ್ ಹೆಸರಿನಲ್ಲಿ ಪಾನ್ ಮಸಾಲಾ ಒಂದನ್ನು ತಯಾರಿಸಲಾಗುತ್ತಿದ್ದು, ಅದೀಗ ರಫೇಲ್ ಜೆಟ್‌ಗಳ ಜಪದ ನಡುವೆ ಕೇಳಿಸತೊಡಗಿದೆ. ಈ ಪಾನ್ ಮಸಾಲಾದ 11 ಸೆಕೆಂಡ್‌ಗಳ ಜಾಹೀರಾತಿನ ವಿಡಿಯೋವೊಂದು ವೈರಲ್ ಆಗಿದೆ.
ದೇಶವು ’’ಆತ್ಮನಿರ್ಭರವಾಗುತ್ತಿದ್ದು, ಕಾನ್ಪುರದಲ್ಲಿ ರಫೇಲ್‌ಗಳ ನಿರ್ಮಾಣವಾಗುತ್ತಿದೆ” ಎಂದು ತಮಾಷೆಯಾಗಿ ಪೋಸ್ಟ್ ಗಳನ್ನು ಹಾಕುತ್ತಿರುವ ನೆಟ್ಟಿಗರು, ಈ ರಫೇಲ್ ಪಾನ್ ಮಸಾಲಾದ ಉಲ್ಲೇಖ ಮಾಡುತ್ತಿದ್ದಾರೆ.
https://twitter.com/GautamTrivedi_/status/1288526497314041856?ref_src=twsrc%5Etfw%7Ctwcamp%5Etweetembed%7Ctwterm%5E1288526497314041856%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fold-video-of-rafale-pan-masala-goes-viral-and-twitter-cant-keep-calm-2745071.html