alex Certify ಸುಷ್ಮಾ ಸ್ವರಾಜ್ ಅವರ ಅಪರೂಪದ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಷ್ಮಾ ಸ್ವರಾಜ್ ಅವರ ಅಪರೂಪದ ಫೋಟೋ ವೈರಲ್

ನವದೆಹಲಿ:ಸುಷ್ಮಾ ಸ್ವರಾಜ್ ದೇಶದ ಅತ್ಯುತ್ತಮ ವಿದೇಶಾಂಗ ವ್ಯವಹಾರಗಳ ಸಚಿವರು. 2019 ರ‌ ಆಗಸ್ಟ್ 6 ರಂದು ಹೃದಯಾಘಾತದಿಂದ ಮೃತಪಟ್ಟರು.

ಅವರ ಅತಿ ಅಪರೂಪದ ಫೋಟೋ ಒಂದನ್ನು ಸೋಹನ್ ರಮೇಶ್ ಎಂಬುವವರು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ. ಸುಷ್ಮಾ‌ ಅವರು ಮಿಜೊರಾಂ ಮಹಿಳೆಯ ದಿರಿಸು ತೊಟ್ಟು ತಮ್ಮ ಪತಿಯ ಜತೆ ಇರುವ ಫೋಟೋ ಇದಾಗಿದೆ.

ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಅವರಿಗೆ ಫೋಟೋವನ್ನು ಟ್ಯಾಗ್ ಮಾಡಿರುವ ಸೋಹನ್ ಇಂಥ ಅಪರೂಪದ ಫೋಟೋಗಳಿದ್ದರೆ ಹಾಕಿ ಎಂದು ವಿನಂತಿಸಿದ್ದಾರೆ.

ಸ್ವರಾಜ್ ಕೌಶಲ್ ಫೋಟೋವನ್ನು ರಿಟ್ವೀಟ್ ಮಾಡಿದ್ದು, ತಾವು 1990 ರಿಂದ 93 ರ‌ ಅವಧಿಯಲ್ಲಿ ತೆಗೆದ ಫೋಟೋ ಎಂದು ನೆನಪಿಸಿಕೊಂಡಿದ್ದಾರೆ.

ಫೋಟೋ ಸಾಕಷ್ಟು ವೈರಲ್ ಆಗಿದ್ದು, 5,900 ಲೈಕ್‌ಗಳನ್ನು ಪಡೆದಿದೆ. ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.
ಸುಷ್ಮಾ ಅವರು 1975 ರಲ್ಲಿ ಸ್ವರಾಜ್ ಕೌಶಲ್ ಅವರನ್ನು ವಿವಾಹವಾದರು.‌ ಅವರಿಗೆ ಬಾನ್ಸುರಿ ಸ್ವರಾಜ್ ಎಂಬ ಮಗಳಿದ್ದಾಳೆ. ಇತ್ತೀಚೆಗೆ ತಾಯಂದಿರ ದಿನದಂದು ಬಾನ್ಸುರಿ ತನ್ನ ಅಮ್ಮ ಸುಷ್ಮಾ‌ಅವರೊಟ್ಟಿಗೆ ಸಣ್ಣಂದಿನಲ್ಲಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...