ಬೇಸಿಗೆಯ ಧಗೆ ಹೆಚ್ಚಾಗಿದೆ. ಇದ್ರಿಂದ ಮನುಷ್ಯರೊಂದೇ ಅಲ್ಲ, ಪ್ರಾಣಿಗಳೂ ಸೆಕೆಗೆ ತತ್ತರಿಸಿ ಹೋಗ್ತಿವೆ. ಪ್ರಾಣಿಗಳಿಗೆ ಕುಡಿಯಲು ಸರಿಯಾದ ನೀರು ಸಿಗ್ತಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಮಾಡಿದ ಕೆಲಸ ಸುದ್ದಿಯಲ್ಲಿದೆ.
ಅರಣ್ಯ ಅಧಿಕಾರಿಯೊಬ್ಬರು ಹಾವಿಗೆ ನೀರು ಕುಡಿಸುತ್ತಿದ್ದಾರೆ. ಈ ವಿಡಿಯೋವನ್ನು ಅವ್ರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಹಳೆ ವಿಡಿಯೋ. ಹಾವು ಬಾಯಾರಿತ್ತು. ಅದಕ್ಕೆ ನೀರು ಕುಡಿಸುತ್ತಿದ್ದೇನೆಂದು ಅಧಿಕಾರಿ ಅವ್ನಿಶ್ ಸರನ್ ಹೇಳಿದ್ದಾರೆ.
ನಾಗರ ಹಾವನ್ನು ನೋಡಿದ್ರೆ ಓಡುವ ಜನರ ಮಧ್ಯೆ ಹಾವನ್ನು ಹಿಡಿದು ಅದಕ್ಕೆ ಬಾಟಲಿಯಲ್ಲಿ ನೀರು ಕುಡಿಸುತ್ತಿರುವ ಅಧಿಕಾರಿ ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಅಧಿಕಾರಿ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಟಲಿ ನೀರನ್ನು ನಿಧಾನವಾಗಿ ಕುಡಿಯುವ ಹಾವು ನಂತ್ರ ಹಿಂತಿರುಗುತ್ತದೆ.