ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರಿಗೆ ಶುಭಕೋರಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿಯಲ್ಲಿ 25 ಅಡಿ ಉದ್ದದ ಶಿಲ್ಪ ನಿರ್ಮಿಸಿದ್ದಾರೆ.
ಇದೊಂದು 25 ಅಡಿ ಉದ್ದದ ಕಲಾಕೃತಿಯಾಗಿದ್ದು 10 ಟನ್ ಮರಳನ್ನ ಬಳಸಿ ನಿರ್ಮಿಸಿದ್ದೇನೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರಿಗೆ ಈ ರೀತಿಯಾಗಿ ಶುಭಕೋರಿದ್ದೇನೆ. ಒಡಿಶಾದ ಪುರಿಯ ಬೀಚ್ನಲ್ಲಿ ಈ ಶಿಲ್ಪವನ್ನ ನಿರ್ಮಿಸೋಕೆ ನಾನು 6 ಗಂಟೆ ಸಮಯಾವಕಾಶ ತೆಗೆದುಕೊಂಡೆ ಅಂತಾ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಹೇಳಿದ್ರು.
ನವೆಂಬರ್ 6ರಂದು ಪಟ್ನಾಯಕ್ ಮರಳು ಕಲಾಕೃತಿ ಮೂಲಕ ಅಮೆರಿಕ ಚುನಾವಣೆಯ ಅಂತಿಮ ಫಲಿತಾಂಶಕ್ಕೆ ಕುತೂಹಲದಿಂದ ಕಾಯುತ್ತಿರುವ ಜನರ ಕಾತುರತೆಯನ್ನ ತೋರಿಸಿದ್ದಾರೆ.