alex Certify ವಿದ್ಯಾರ್ಥಿಗಳಿಗೆ ವಿಶೇಷ ʼಮೀಸಲಾತಿʼ ನೀಡಿದ ಒಡಿಶಾ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ವಿಶೇಷ ʼಮೀಸಲಾತಿʼ ನೀಡಿದ ಒಡಿಶಾ ಸರ್ಕಾರ

ಸರ್ಕಾರಿ ಶಾಲೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ನೀಡಲು ಓಡಿಶಾ ಸರ್ಕಾರ ನಿರ್ಧಾರ ಕೈಗೊಂಡಿದೆ. ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಪ್ರತಿ ವರ್ಷ ಆಸ್ತಿ ಘೋಷಣೆ ಮಾಡೋದು ಕಡ್ಡಾಯಗೊಳಿಸುವ ಪ್ರಸ್ತಾಪಕ್ಕೂ ಮುನ್ನ ಈ ಅನುಮೋದನೆ ನೀಡಿದೆ.

ಓಡಿಶಾ ಸಿಎಂ ನವೀನ್​ ಪಟ್ನಾಯಕ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾಪಗಳನ್ನ ಅಂಗೀಕರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಪೂರೈಸಿದ ವಿಧ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಈ ವಿಶೇಷ ಕೋಟಾವನ್ನ ಪರಿಚಯಿಸಲಿದ್ದೇವೆ ಎಂದು ಶಾಲಾ ಹಾಗೂ ಸಮೂಹ ಶಿಕ್ಷಣ ಸಚಿವ ಎಸ್​. ಆರ್. ದಾಶ್​ ಹೇಳಿದ್ರು.

ನಗರ ಪ್ರದೇಶಗಳಲ್ಲಿ ಸುಲಭವಾಗಿ ಲಭ್ಯವಿರುವ ಕೋಚಿಂಗ್​ ಹಾಗೂ ಡಿಜಿಟಲ್​ ಕೋರ್ಸ್​ಗಳಿಂದ ವಂಚಿತರಾದ ಗ್ರಾಮೀಣ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನ ಹೆಚ್ಚಿಸೋದು ಈ ಮೀಸಲಾತಿಯ ಉದ್ದೇಶವಾಗಿದೆ ಎಂದು ಒಡಿಶಾ ಸರ್ಕಾರ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...