alex Certify ಬೆಚ್ಚಿಬೀಳಿಸುವಂತಿದೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪಿ ಹಿನ್ನೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪಿ ಹಿನ್ನೆಲೆ

ಐದು ವರ್ಷದ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರಗೈದು, ಕೊಲೆ ಮಾಡಿರುವ ಪ್ರಕರಣ ಒಡಿಶಾದ ನಯನ್‌ಗಡದಲ್ಲಿ ಜರುಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಅರುಣ್ ಬೋತ್ರಾ, “ಪ್ರಕರಣ ಸಂಬಂಧ ಬಂಧಿಸಲಾಗಿರುವ ಆಪಾದಿತ ಸರೋಜ್ ಸೇಥಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ಬೆಳೆಸಿಕೊಂಡಿದ್ದ. ತನ್ನ ಸಹೋದರಿಯ ಫೋನ್‌ನಿಂದ ಸರೋಜ್ ಬಹಳಷ್ಟು ಬಾರಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ. ಆತ ಈ ಕ್ರೈಮ್ ನಡೆಸುವ ಹಿಂದಿನ ದಿನ ಆಕೆಯ ಫೋನ್‌ನಲ್ಲಿ ಹಗಲು-ರಾತ್ರಿಯಿಡೀ ಅಶ್ಲೀಲ ಚಿತ್ರ ವೀಕ್ಷಿಸಿದ್ದ” ಎಂದು ತಿಳಿಸಿದ್ದಾರೆ.

ಜುಲೈ 14ರಂದು ತನ್ನ ತಾಯಿ ಹಾಗೂ ಸಹೋದರಿ ಮನೆಯಲ್ಲಿ ಇಲ್ಲದೇ ಇದ್ದ ವೇಳೆ, ತನ್ನ ಮನೆಯಂಗಳಲ್ಲಿದ್ದ ಗಿಡಗಳಲ್ಲಿ ಬಿಟ್ಟಿದ್ದ ಹಣ್ಣನ್ನು ಕೇಳಲು ಬಂದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರಗೈಯಲು ಮುಂದಾಗಿದ್ದಾನೆ ಶಿಶುಕಾಮಿ. ತನ್ನ ಮೇಲಾಗುತ್ತಿರುವ ಹಿಂಸೆಯನ್ನು ಗ್ರಹಿಸಿದ ಬಾಲಕಿ ಜೋರಾಗಿ ಕಿರುಚಿಕೊಳ್ಳುತ್ತಲೇ ಆಕೆಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ ಪಾತಕಿ.

ಇದಾದ ಮೇಲೆ ಬಾಲಕಿಯ ಮೃತ ದೇಹದ ಮೇಲೆಯೇ ಅತ್ಯಾಚಾರವೆಸಗಿದ ಈ ಕಾಮುಕ ಬಾಲಕಿಯ ದೇಹವನ್ನು ಸೆಣಬಿನ ಚೀಲವೊಂದರಲ್ಲಿ ಹಾಕಿ, ಅದನ್ನು ಹತ್ತಿರದ ಕೊಳವೊಂದರ ಬಳಿ ತೆಂಗಿನ ಮರದ ಗರಿಗಳಿಂದ ಮುಚ್ಚಿ, ಪೊದೆಯೊಂದಕ್ಕೆ ಎಸೆದಿದ್ದಾನೆ. ಬಾಲಕಿಯ ಅಸ್ಥಿಯು ಒಂಬತ್ತು ದಿನಗಳ ಬಳಿಕ ಆಕೆಯ ಮನೆಯ ಹಿಂದೆ ಇರುವ ಕೊಳದ ಪ್ರದೇಶದಲ್ಲಿ ಸಿಕ್ಕಿದೆ.

ಟೀನೇಜರ್‌ ಆಗಿರುವ ಈ ಶಿಶುಕಾಮಿ ದೊಡ್ಡ ಫಟಿಂಗನಾಗಿದ್ದು, ಶಿಶುಗಳ ಮೇಲೆ ಅತ್ಯಾಚಾರ ನಡೆದಿದ್ದ ಅನೇಕ ಪ್ರಕರಣಗಳ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ತಿಳಿದುಕೊಂಡು, ಈ ಅಪರಾಧವೆಸಗಿದ್ದಾನೆ ಎಂದು ಬೋತ್ರಾ ತಿಳಿಸಿದ್ದು, 22 ವರ್ಷಗಳ ತಮ್ಮ ಸೇವಾವಧಿಯಲ್ಲಿ ಕಂಡ ಅತ್ಯಂತ ಬರ್ಬರ ಪ್ರಕರಣ ಇದಾಗಿದೆ ಎಂದಿದ್ದಾರೆ.

ತಮ್ಮ ಮಗಳಿಗೆ ಮೇಲೆ ಆದ ಈ ಬರ್ಬರ ಘಟನೆಗೆ ನ್ಯಾಯ ಕೋರಿ ಪೊಲೀಸ್ ಠಾಣೆಯತ್ತ ಅದೆಷ್ಟು ಅಲೆದಾಡಿದರೂ ಪ್ರಯೋಜನವಾಗದೇ ಹೋದಾಗ, ಆಕೆಯ ಹೆತ್ತವರು ಖುದ್ದು ಒಡಿಶಾ ವಿಧಾನ ಸಭೆಯ ಮುಂದೆ ಆತ್ಮಾಹುತಿಗೆ ಮುಂದಾಗಿದ್ದರು. ಇದರ ಬೆನ್ನಿಗೆ ತನಿಖೆಗೆ ಚುರುಕು ಮುಟ್ಟಿಸಿದ ಪೊಲೀಸರು ಬೆಚ್ಚಿಬೀಳಿಸುವ ಈ ಪ್ರಕರಣವನ್ನು ಬೇಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...