ರಾಷ್ಟ್ರೀಯ ಮತದಾರರ ದಿನವಾದ ಜನವರಿ 25ರಂದು ರಾಷ್ಟ್ರೀಯ ಚುನಾವಣಾ ಆಯೋಗ ಡಿಜಿಟಲ್ ವೋಟರ್ ಐಡಿ (ಎಪಿಕ್)ಗೆ ಚಾಲನೆ ನೀಡಿದ್ದು ನಿಮಗೆ ನೆನಪಿದ್ದಿರಬಹುದು.
ಸದ್ಯದಲ್ಲೇ ವಿಧಾನಸಭಾ ಚುನಾವಣೆಯನ್ನ ಎದುರಿಸಲಿರುವ ಆಸ್ಸಾಂ, ಪಾಂಡಿಚೆರಿ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ಭಾಗದ ಜನತೆ ಹೊಸ ಡಿಜಿಟಲ್ ಸೌಲಭ್ಯವನ್ನ ಬಳಸಿಕೊಳ್ಳಬಹುದಾಗಿದೆ.
1. ಡಿಜಿಟಲ್ ವೋಟರ್ ಐಡಿ ಎಂದರೇನು..?
ಎಪಿಕ್ ಅನ್ನೋದು ಮತದಾನದ ಚೀಟಿಯ ಡಿಜಿಟಲ್ ರೂಪವಾಗಿದ್ದು ಪಿಡಿಎಫ್ ರೂಪದಲ್ಲಿ ನೀವು ಮೊಬೈಲ್ ಇಲ್ಲವೇ ಕಂಪ್ಯೂಟರ್ನ ಮೂಲಕ ಪಡೆಯಬಹುದಾಗಿದೆ. ಈ ಮೂಲಕ ನಿಮ್ಮ ವೋಟರ್ ಐಡಿ ಪಿಡಿಎಫ್ ಫಾರ್ಮಾಟ್ನ ರೂಪದಲ್ಲಿ ನಿಮ್ಮದೇ ಮೊಬೈಲ್ ಹಾಗೂ ಕಂಪ್ಯೂಟರ್ನಲ್ಲಿ ಸುರಕ್ಷಿತವಾಗಿ ಇರಲಿದೆ.
2. ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡೋದು ಹೇಗೆ..?
ಡಿಜಿಟಲ್ ವೋಟರ್ ಐಡಿಯನ್ನ ನೀವು ವೋಟರ್ ಪೋರ್ಟಲ್ ಇಲ್ಲವೇ ಮತದಾರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಅಥವಾ ಎನ್ವಿಎಸ್ಪಿಯಲ್ಲಿ ಪಡೆಯಬಹುದಾಗಿದೆ.
ವೋಟರ್ ಪೋರ್ಟಲ್ : http://voterportal.eci.gov.in/
ಎನ್ವಿಎಸ್ಪಿ : https://nvsp.in/
ವೋಟರ್ ಹೆಲ್ಪ್ಲೈನ್ ಮೊಬೈಲ್ ಅಪ್ಲಿಕೇಶನ್ :
ಆಂಡ್ರಾಯ್ಡ್ : https://play.google.com/store/apps/details?id=com.eci.citizen
ಐಓಎಸ್ : https://apps.apple.com/in/app/voter-helpline/id1456535004
ಡಿಜಿಟಲ್ ವೋಟರ್ ಐಡಿ ಪಡೆಯಲು ಯಾರು ಅರ್ಹರು..?
ಯಾರ್ಯಾರ ಬಳಿ ಎಪಿಕ್ ನಂಬರ್ ಇದೆಯೋ ಅವರೆಲ್ಲ ಡಿಜಿಟಲ್ ವೋಟರ್ ಐಡಿ ಪಡೆಯಬಹುದಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮೊಬೈಲ್ ಸಂಖ್ಯೆ ಸಮೇತ ಫಾರಂ 6 ಅರ್ಜಿ ಸಲ್ಲಿಸಿದವರು ಈಗ ಡಿಜಿಟಲ್ ವೋಟರ್ ಐಡಿ ಪಡೆಯಬಹುದಾಗಿದೆ.
ನಾನು ಎಪಿಕ್ ಕಳೆದುಕೊಂಡುದ್ದೇನೆ., ಇ – ಎಪಿಕ್ನ್ನು ಡೌನ್ಲೋಡ್ ಮಾಡೋದು ಹೇಗೆ..?
ನಿಮ್ಮ ಹೆಸರನ್ನು http://voterportal.eci.gov.in/ ಅಥವಾ http://electoralsearch.in/ ನಿಂದ ಎಲೆಕ್ಟರಲ್ ರೋಲ್‌ನಲ್ಲಿ ಹುಡುಕಬಹುದು, ನಿಮ್ಮ ಇಪಿಐಸಿ ಸಂಖ್ಯೆಯನ್ನು ಗಮನಿಸಿ ನಂತರ ಇ-ಎಪಿಕ್ ಡೌನ್‌ಲೋಡ್ ಮಾಡಿ.
ನನ್ನ ಬಳಿ ಎಪಿಕ್ ಸಂಖ್ಯೆ ಇಲ್ಲ ಆದರೆ ನನ್ನ ಬಳಿ ಫಾರ್ಮ್ 6 ರೆಫರೆನ್ಸ್ ಸಂಖ್ಯೆ ಇದೆ. ನಾನು ಇ ಎಪಿಕ್ ಡೌನ್ಲೋಡ್ ಮಾಡಬಹುದೇ..?
ಖಂಡಿತ. ರೆಫರೆನ್ಸ್ ಸಂಖ್ಯೆಯ ಸಹಾಯದಿಂದ ಇ-ಎಪಿಕ್ ಡೌನ್ಲೋಡ್ ಮಾಡಬಹುದು.
ಇ ಎಪಿಕ್ ಯಾವ ರೂಪದಲ್ಲಿ ಇರುತ್ತದೆ..?
ಇದು ಪಿಡಿಎಫ್ ಫಾರ್ಮೆಟ್ನಲ್ಲಿದ್ದು ನೀವು ಇ ಎಪಿಕ್ನ್ನು ಡೌನ್ಲೋಡ್ ಮಾಡಬಹುದಾಗಿದೆ.
ಇ ಎಪಿಕ್ನ ಗಾತ್ರ ಎಷ್ಟಿರುತ್ತದೆ..?
250ಕೆಬಿ
ಇ ಎಪಿಕ್ ಡೌನ್ಲೋಡ್ ಮಾಡೋದು ಹೇಗೆ..?
ಕೆಳಗಿನ ಹಂತಗಳನ್ನು ಬಳಸಿಕೊಂಡು ನೀವು ಇ-ಎಪಿಕ್ನ್ನು http://voterportal.eci.gov.in/ ಅಥವಾ https://nvsp.in/ ಅಥವಾ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು.
ವೋರ್ಟಲ್ ಪೋರ್ಟಲ್ಗೆ ಲಾಗಿನ್ ಮಾಡಿ
ಮೆನು ನೇವಿಗೇಷನ್ನಲ್ಲಿ ಡೌನ್ಲೋಡ್ ಇ ಎಪಿಕ್ ಆಯ್ಕೆ ಮಾಡಿ.
ಎಪಿಕ್ ಸಂಖ್ಯೆ ಅಥವಾ ಫಾರ್ಮ್ ರೆಫರೆನ್ಸ್ ಸಂಖ್ಯೆ ನಮೂದಿಸಿ.
ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನ ನಮೂದಿಸಿ.
ಡೌನ್ಲೋಡ್ ಇ ಎಪಿಕ್ ಮೇಲೆ ಕ್ಲಿಕ್ ಮಾಡಿ
ಮೊಬೈಲ್ ಸಂಖ್ಯೆ ನೋಂದಣಿ ಮಾಡದೇ ಇದ್ದಲ್ಲಿ ಕೆವೈಸಿ ಯನ್ನು ಪೂರ್ತಿ ಮಾಡಿ.
ಇ ಎಪಿಕ್ನ್ನು ಡೌನ್ಲೋಡ್ ಮಾಡಿ