alex Certify ಗಮನಿಸಿ..! ಹಳೆ ಚಿನ್ನ ಮಾರುವವರಿಗೂ ಶಾಕ್ – ಬೀಳಲಿದೆ GST ಬರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಹಳೆ ಚಿನ್ನ ಮಾರುವವರಿಗೂ ಶಾಕ್ – ಬೀಳಲಿದೆ GST ಬರೆ

ತಮ್ಮಲ್ಲಿರುವ ಹಳೆ ಚಿನ್ನ ಮಾರಾಟ ಮಾಡುವವರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಚಿನ್ನಕ್ಕೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಈ ಕುರಿತಾಗಿ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಇಸಾಕ್ ಮಾಹಿತಿ ನೀಡಿದ್ದಾರೆ.

ಹಳೆ ಬಂಗಾರಕ್ಕೆ ಶೇಕಡ 3 ರಷ್ಟು ಜಿಎಸ್ಟಿ ವಿಧಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ಜನರಿಗೆ ಹಳೆ ಬಂಗಾರ ಮಾರಾಟದಿಂದ ಕಡಿಮೆ ಲಾಭ ಸಿಗಲಿದೆ. ರಾಜ್ಯ ಹಣಕಾಸು ಮಂತ್ರಿಗಳ ಸಮಿತಿ ಈ ಪ್ರಸ್ತಾವನೆಯನ್ನು ಒಪ್ಪಿದೆ ಎಂದು ಥಾಮಸ್ ತಿಳಿಸಿದ್ದಾರೆ.

ಕೇರಳ, ಬಿಹಾರ, ಗುಜರಾತ್, ಪಂಜಾಬ್, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಹಣಕಾಸು ಸಚಿವರು ಈ ಸಮಿತಿಯಲ್ಲಿ ಸೇರಿದ್ದಾರೆ. ಚಿನ್ನ ಮತ್ತು ಅಮೂಲ್ಯ ರತ್ನಗಳ ಸಾಗಣೆಗೆ ಇ-ವೇ ಮಸೂದೆಯ ಅನುಷ್ಠಾನವನ್ನು ಪರಿಶೀಲಿಸಲು ಸಚಿವರ ಗುಂಪನ್ನು ರಚಿಸಲಾಗಿತ್ತು. ಮಂತ್ರಿಗಳ ಗುಂಪು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿತ್ತು. ಒಂದು ಲಕ್ಷ ರೂಪಾಯಿ ಮೌಲ್ಯದ ಹಳೆಯ ಆಭರಣಗಳನ್ನು ಮಾರಾಟ ಮಾಡಿದರೆ, 3000 ರೂಪಾಯಿಗಳನ್ನು ಜಿಎಸ್ಟಿ ಎಂದು ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...