alex Certify BIG NEWS: ಕೇವಲ 250 ರೂ.ಗೆ ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇವಲ 250 ರೂ.ಗೆ ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ

ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಫ್ ಇಂಡಿಯಾ, ಮನೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ಕೋವಿಸೆಲ್ಫ್ ಎಂಬ ಕಿಟ್‌ಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ನಂತ್ರ ಜನರು ಮನೆಯಲ್ಲಿಯೇ ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಮೂಲಕ  ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದು. ಈ ಕಿಟ್ ಬೆಲೆ ಕೇವಲ 250 ರೂಪಾಯಿ. ವಿಶೇಷವೆಂದರೆ ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಸಿಗಲಿದೆ.

ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ನ್ನು ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ಸಿದ್ಧಪಡಿಸಿದೆ ಎಂದು ಐಸಿಎಂಆರ್ ಹೇಳಿದೆ. ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿರುವ ಜನರು ಮಾತ್ರ ಇದನ್ನು ಬಳಸಬೇಕು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆ ಮಾಡಬಹುದು. ಪರೀಕ್ಷೆ ವೇಳೆ ವರದಿ ಧನಾತ್ಮಕವಾಗಿ ಬಂದ್ರೆ ಮತ್ತೆ ಪರೀಕ್ಷಿಸುವ ಅಗತ್ಯವಿಲ್ಲ. ತಕ್ಷಣ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ ಕೊರೊನಾ ಲಕ್ಷಣವಿದ್ದು, ವರದಿ ನಕಾರಾತ್ಮಕವಾಗಿ ಬಂದಿದ್ದರೆ ಆಗ  ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬಹುದು ಎಂದು ಐಸಿಎಂಆರ್ ಹೇಳಿದೆ.

ಕೋವಿಡ್ ಕುರಿತು ಅರಿವು ಮೂಡಿಸಲು‌ ಪೊಲೀಸ್ ಅಧಿಕಾರಿಯಿಂದ ಗಾಯನ

ಒಂದು ವಾರದಲ್ಲಿ ಟೆಸ್ಟ್ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಉತ್ಪನ್ನವನ್ನು ತಯಾರಿಸಲು 5 ತಿಂಗಳು ಬೇಕಾಗಿದೆ. ಇದ್ರಿಂದ ಯಾವುದೇ ಅಪಾಯವಿಲ್ಲ. ಕಿಟ್ ಮೇಲೆ ಇದರ ಬಳಕೆ ವಿವರವಿದೆ. ಇದರಲ್ಲಿಯೇ ಸುರಕ್ಷತಾ ಚೀಲ ಇರುತ್ತದೆ. ಇದರಲ್ಲಿ ಬಳಸಿದ ಕಿಟ್ ವಿಲೇವಾರಿ ಮಾಡಬಹುದು. ಸಕಾರಾತ್ಮಕ ಪರೀಕ್ಷೆಯು 5 ರಿಂದ 7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನೆಗೆಟಿವ್ ಫಲಿತಾಂಶ ಗರಿಷ್ಠ 15 ನಿಮಿಷಗಳಲ್ಲಿ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...